UK Suddi
The news is by your side.

ಬದುಕಿನಲ್ಲಿ ಸುಸಂಸ್ಕøತರಾಗಲು ಪುರಾಣ ಪ್ರವಚನಗಳ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ: ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ.

ಮುನವಳ್ಳಿ(ಬೆಳಗಾವಿ): “ಇಂದಿನ ಯಾಂತ್ರಿಕೃತ ಬದುಕಿನಲ್ಲಿ ನಮ್ಮ ಸಂಸ್ಕøತಿಯನ್ನು ಸಾರುವ ಪುರಾಣ ಪ್ರವಚನಗಳಲ್ಲಿ ಜೀವನಮೌಲ್ಯ ಅಡಗಿದೆ.ದೇವಸ್ಥಾನಗಳು ಹಬ್ಬ ಹರಿದಿನಗಳಲ್ಲಿ ಹಮ್ಮಿಕೊಳ್ಳುವ ಪುರಾಣ ಪ್ರವಚನಗಳನ್ನು ಕೇಳುವುದರಿಂದ ಜೊತೆಗೆ ಅದರಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ನಮ್ಮ ಬದುಕನ್ನು ಉತ್ತಮ ಪಡಿಸಿಕೊಳ್ಳಲು ಸಾಧ್ಯ.”ಎಂದು ಸವದತ್ತಿ ಮೂಲಿಮಠದ ಷಟಸ್ಥಳ ಬ್ರಹ್ಮ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ಅವರು ಮುನವಳ್ಳಿಯ ದೇವನಗಾವಿಯವರ ಕಿಲ್ಲಾ ಆವರಣದಲ್ಲಿ ಜರುಗಿದ ಶ್ರೀ ವೀರಭದ್ರೇಶ್ವರ ಪುರಾಣ ಪ್ರವಚನವನ್ನು ನೀಡಿ ಮಾತನಾಡಿದರು.

ಮಂಗಳವಾರದಿಂದ ಆರಂಭಗೊಂಡ ಮುನವಳ್ಳಿಯ ಜೀರ್ಣೋದ್ಧಾರಗೊಂಡ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಉದ್ಘಾಟನೆ ಮತ್ತು ನೂತನ ಮೂರ್ತಿ ಪ್ರತಿಷ್ಠಾಪನೆಯ ನಿಮಿತ್ತ ಹಮ್ಮಿಕೊಂಡಿರುವ ಶ್ರೀ ವೀರಭದ್ರೇಶ್ವರ ಪುರಾಣ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಟಕೋಳ ಚಂದರಗಿ ಶ್ರೀ ಗುರುಗಡದೇವಶ್ವರ ಸಂಸ್ಥಾನ ಹಿರೇಮಠದ ಷಟಸ್ಥಳ ಬ್ರಹ್ಮ ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳ ವಹಿಸಿದ್ದರು.ಭಂಡಾರಹಳ್ಳಿ ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮಿಗಳು ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಯಕ್ರಮದಲ್ಲಿ ಮುನವಳ್ಳಿಯ ಗಣ್ಯರಾದ ರವೀಂದ್ರ ಭೂಪಾಲಪ್ಪ ಯಲಿಗಾರ,ಅಂಬರೀಷ ಯಲಿಗಾರ,ಚಂದ್ರಯ್ಯ ವಿರಕ್ತಮಠ,ಸಿಂಗಯ್ಯಸ್ವಾಮಿ ಹಿರೇಮಠ,ಈರಣ್ಣ ಕಂಬಾರ,ದೇವನಗಾವಿ,ಉಮೇಶ ಚುಳಕಿ,ಈರಯ್ಯ ಮಠಪತಿ,ರಾಜುಶಾಸ್ತ್ರೀ ಹಿರೇಮಠ,ಕಲ್ಲಪ್ಪ ಕಿತ್ತೂರ,ಮಂಜು ಹನಸಿ ಬಸವರಾಜ ವಿರಪಯ್ಯನವರಮಠ,ಪ್ರಭುಕುಮಾರ ಹನಸಿ, ಗುರುನಾಥ ಪತ್ತಾರ,ಬಾಳು ಹೊಸಮನಿ ಮೊದಲಾದವರ ಉಪಸ್ಥಿತಿಯಲ್ಲಿ ಪೂಜ್ಯರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಂಡಾರಹಳ್ಳಿ ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮಿಗಳು ಮಾತನಾಡಿ “ಮುನವಳ್ಳಿ ಇತಿಹಾಸ ಪ್ರಸಿದ್ದ ಮುನಿಗಳ ತಾಣ.ಇಲ್ಲಿ ಯಾವುದೇ ದಾರ್ಮಿಕ ಕಾರ್ಯಗಳು ಜರುಗಿದರೂ ಸರ್ವಧರ್ಮ ಸಮನ್ವಯತೆಯಿಂದ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸುತ್ತಾರೆ.ಇಲ್ಲಿನ ಜನ ಉದಾರವಂತರೂ ಸಹೃದಯರೂ ಆಗಿದ್ದು ನೂತನ ವೀರಭದ್ರೇಶ್ವರ ಜೀರ್ಣೋದ್ಧಾರ ಸಮಿತಿಯ ಎಲ್ಲರೂ ಹಗಲಿರುಳು ದೇವಸ್ಥಾನ ಅಭಿವೃದ್ಧಿಗೆ ಕೈ ಜೋಡಿಸಿದ್ದು ದೇವಸ್ಥಾನ ಈಗ ಕಂಗೊಳಿಸುತ್ತಿದೆ.ಸವದತ್ತಿ ಮೂಲಿಮಠದ ಪೂಜ್ಯರ ಪುರಾಣ ಪ್ರವಚನವನ್ನು ಆಲಿಸುವ ಜೊತೆಗೆ ಮೌಲ್ಯಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ” ಎಂದು ಕರೆ ನೀಡಿದರು.

ದಿವ್ಯ ಸಾನಿಧ್ಯವನ್ನು ವಹಿಸಿದ್ದ ಕಟಕೋಳ ಚಂದರಗಿ ಶ್ರೀ ಗುರುಗಡದೇವಶ್ವರ ಸಂಸ್ಥಾನ ಹಿರೇಮಠದ ಷಟಸ್ಥಳ ಬ್ರಹ್ಮ ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ “ ಬದುಕಿನಲ್ಲಿ ಮುತ್ತೈದೆತನ ಮಹತ್ವದ್ದು.ಕುಂಕುಮ,ಹಸಿರು ಬಳೆ,ಕಾಲುಂಗರ.ತಾಳಿ ಇವುಗಳ ಮಹತ್ವವನ್ನು ತಿಳಿಸುತ್ತ ಇಂದಿನ ಟೀವಿ ಯುಗದಲ್ಲಿ ಕೂಡ ಇಂತಹ ಪುರಾಣ ಪ್ರವಚನದಲ್ಲಿ ಮುನವಳ್ಳಿಯ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಸಂತಸದ ಸಂಗತಿ.” ಎಂದು ತಿಳಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಬಸವರಾಜ ಚಿರನೂರ,ಉಮೇಶ ಕಮ್ಮಾರರಿಂದ ಸಂಗೀತ ಸೇವೆ ಜರುಗಿತು.ಸಂಗಪ್ಪ ಹನಸಿ,ಪಂಚಪ್ಪ ಹನಸಿ,ಈರಪ್ಪ ಹನಸಿ,ಪ್ರಕಾಶ ಹನಸಿ ಕುಟುಂಬದವರಿಂದ ಮೊದಲ ದಿನದ ಪ್ರಸಾದ ಸೇವೆ ಜರುಗಿತು.ಶಿಕ್ಷಕ ಗುರುನಾಥ ಪತ್ತಾರ ಸ್ವಾಗತಿಸಿದರು.ಐ ಕೆ ಮಠಪತಿ ನಿರೂಪಿಸಿದರು.ಬಾಳು ಹೊಸಮನಿ ವಂದಿಸಿದರು.

Comments