UK Suddi
The news is by your side.

ಪಿಯುಸಿ ಫಲಿತಾಂಶ ಗೊಂದಲ ಸಿಇಟಿ -ಕಾಮೇಡ್ ಕೆ ಫಲಿತಾಂಶ ಮುಂದಕ್ಕೆ

ದ್ವಿತೀಯ ಪಿಯುಸಿ ಫಲಿತಾಂಶ ಸಾಕಷ್ಟು ಗೊಂದಲ ಸೃಷ್ಠಿ ಮಾಡಿರುವ ಹಿನ್ನೆಲೆಯಲ್ಲಿ ಸಿಇಟಿ ಫಲಿತಾಂಶವನ್ನು ಕೆಲದಿನಗಳ ಕಾಲ ಮುಂದೂಡುವ ಸಾಧ್ಯತೆಯಿದೆ. 
ಸಿಇಟಿ ಫಲಿತಾಂಶ ಮುಂ ದೂಡುವಂತೆ ಮನವಿ ಮಾಡಿದ್ದು, ಇದಕ್ಕೆ ಉನ್ನತ ಶಿಕ್ಷಣ ಸಚಿವರು ಸ್ಪಂದಿಸಿದ್ದಾರೆ. ಪರೀಕ್ಷಾ ಪ್ರಾಧಿಕಾರ ಕೂಡ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ನುಡಿದರು. 
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಿಇಟಿ ರ‌್ಯಾಂಕ್ ಪಟ್ಟಿಯನ್ನೂ ಸಹಾ ಜೂನ್ 1ರ ಒಳಗಾಗಿ ಪ್ರಕಟಿಸಬಾರದು ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮಾಡಿ ದ್ದು, ಅವರು ಅದಕ್ಕೆ ಸ್ಪಂದಿಸಿದ್ದಾರೆ. ವಿದ್ಯಾರ್ಥಿಗಳು ಸಿಇಟಿ ಫಲಿತಾಂಶದಿಂದ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸಚಿವ ಕಿಮ್ಮನೆ ರತ್ನಾಕರ ಮನವಿ ಮಾಡಿದರು. 
ಫಲಿತಾಂಶ ಪ್ರಕಟ ಸಂದರ್ಭ ದಲ್ಲಿ ಖಾಸಗಿ ಅಂತರ್ಜಾಲ ಒಂದು ತ್ವರಿತ ಫಲಿತಾಂಶ ಪ್ರಕಟಿ ಸುವ ಸಂದರ್ಭದಲ್ಲಿ ಉಂಟು ಮಾಡಿದ ಗೊಂದಲದಿಂದ ಭಾರಿ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪಿಯು ಮಂಡಳಿಯ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಯಾರಿಗೂ ತೊಂದರೆಯಾ ಗಬಾ ರದು ಎನ್ನುವ ಕಾರಣದಿಂದ ಸಿಇಟಿ ಪರೀಕ್ಷೆ ಮುಂದೂಡ ಲಾಗುತ್ತಿದೆ ಎಂದರು. 
ಮೊದಲ ಎರಡು ದಿನ ಮಂಡಲಿ, ಸಕಾರಾತ್ಮಕವಾಗಿ ಪ್ರತಿಕ್ರಿ ಯಿಸಿದ್ದರೆ ಈ ಗೊಂದಲ ಸೃಷ್ಠಿಯಾಗುತ್ತಿರಲಿಲ್ಲ, ಈಗ ಫಲಿತಾಂಶದ ನಂತರ ಉಂಟಾದ ಗೊಂದಲ ಸರಿಪಡಿಸಲು ಮಂಡಲಿ ಕಾರ್ಯೋನ್ಮುಖವಾಗಿದೆ. ಈ ಗೊಂದಲಕ್ಕೆ ಕಾರಣವಾದ ಅಂತರ್ಜಾಲದ ಮೇಲೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಮೇ19ರಂದು ದೂರು ದಾಖಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. 
ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆ ನಂತರ ಬರುವ ವರದಿ ಆಧರಿಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು. ಮಕ್ಕಳು, ಪೋಷಕರ ಆತಂಕದ ಬಗ್ಗೆ ಮಂಡಳಿಯ ನಿರ್ದೇಶಕಿ ಸುಷಮಾ ಗೋಡಬೋಲೆ ಸ್ಪಷ್ಟನೆ ನೀಡುವಂತೆ ತಾವು ಸೂಚನೆ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೇ ಇರುವ ಹಿನ್ನೆಲೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಂದ ವಿಚಾರಣೆಗೆ ಆದೇಶಿಸಿರುವುದಾಗಿ ಶಾಲಾ ಶಿಕ್ಷಣ ಮಂತ್ರಿ ಸ್ಪಷ್ಟಪಡಿಸಿದರು. 
ಈ ಗೊಂದಲಕ್ಕೆ ಕಾರಣರಾದ ಯಾವುದೇ ವ್ಯಕ್ತಿಯನ್ನು ಇಲಾಖೆ ರಕ್ಷಿಸುವುದಿಲ್ಲ, ಅಲ್ಲದೇ ಮೇ 27ರ ಒಳಗಾಗಿ ವಿದ್ಯಾರ್ಥಿಗಳಿಗೆ ನಕಲು ಪ್ರತಿ ಹಾಗೂ ಮರು ಮೌಲ್ಯ ಮಾಪನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಯಾವುದೇ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಪಡುವ ಅಗತ್ಯವಿಲ್ಲ. ಈ ಗೊಂದಲಕ್ಕೆ ಕಾರಣರಾದ ಪಿಯು ಮಂಡಳಿಯ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಲು ಸಹಾ ಪ್ರಧಾನ ಕಾರ್ಯದರ್ಶಿಯವರಿಗೆ ಅಧಿಕಾರ ನೀಡಲಾಗಿದೆ. ಯಾವುದೇ ಒಬ್ಬ ವಿದ್ಯಾರ್ಥಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸಚಿವರು ಹೇಳಿದರು.
ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಹಿತವನ್ನು ಕಾಪಾಡಲು ಬದ್ಧವಾಗಿದೆ, ಮರು ಮೌಲ್ಯಮಾಪನ ಮಾಡಲು ನಾಲ್ಕರಿಂದ ಐದು ಪ್ರತ್ಯೇಕ ಸೆಲ್‌ಗಳನ್ನ ಸ್ಥಾಪಿಸಲಾಗಿದೆ, ಮೂವರು ನುರಿತ ಉಪನ್ಯಾಸಕರು ಮೌಲ್ಯ ಮಾಪನ ಮಾಡಿ ಸತ್ಯಾಂಶವನ್ನ ಪ್ರಕಟಿಸಲಿದ್ದಾರೆ. ಇದುವರೆಗೆ ನಕಲು ಪ್ರತಿಗೆ 20,623 ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದಾರೆ. ಮರು ಮೌಲ್ಯಮಾಪನಕ್ಕೆ 2,825 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ನಕಲು ಪ್ರತಿ ಪಡೆಯಲು ಮೇ 25ರ ವರೆಗೆ ಕಾಲಾವಕಾಶ ನೀಡಲಾಗಿದೆ ಎಂದರು. 
ಎನ್‌ಜಿಓಗಳ ಸಹಾಯದಿಂದಲೂ ವಿದ್ಯಾರ್ಥಿಗಳಿಗೆ ನಕಲು ಪ್ರತಿ ನೀಡುವ ಪ್ರಕ್ರಿಯೆ ಆರಂಭಗೊಂಡಿದೆ. ವಿದ್ಯಾರ್ಥಿಗಳಿಗೆ ಪಿಯು ಮಂಡಳಿಯಿಂದ ಮಾಹಿತಿ ವಿವರ ಪಡೆಯಲು ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ, ಸಹಾಯವಾಣಿ ಸಂಖ್ಯೆ-080 2383900ಗೆ ಸಂಪರ್ಕಿಸಿ ಮಾಹಿತಿ ಕಲೆ ಹಾಕಬಹುದು ಎಂದು ಸಚಿವರು ವಿವರಣೆ ನೀಡಿದರು. 
ನಕಲು ಪ್ರತಿ ಹಾಗೂ ಮರು ಮೌಲ್ಯಮಾಪನದ ಶುಲ್ಕವನ್ನು 2009ರಿಂದಲೂ ಪ್ರತಿವರ್ಷ ಮಂಡಳಿ ಹೆಚ್ಚಳ ಮಾಡಿಕೊಂಡುಬಂದಿದೆ, ಇದನ್ನು ಶುಲ್ಕರಹಿತ ಮಾಡುವ ಉದ್ದೇಶ ಪ್ರಸ್ತುತ ಸರ್ಕಾರದ ಮುಂದೆ ಇಲ್ಲ ಎಂದರು. 
ಶಿಕ್ಷಣ ಕಾಯಿದೆಯಂತೆ ತಪ್ಪು ಪ್ರಶ್ನೆ ಕೇಳಿದ್ದಲ್ಲಿ, ವಿದ್ಯಾರ್ಥಿ ಅದಕ್ಕೆ ಉತ್ತರಿಸಲು ಪ್ರಯತ್ನಿಸಿದ್ದಲ್ಲಿ ಮಾತ್ರ ಅಂತಹ ವಿದ್ಯಾರ್ಥಿಗೆ ಕೃಪಾಂಕ ನೀಡಲಾಗುವುದು, ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ ಎಂದರು. 
ಪ್ರತಿ ವರ್ಷ ಹಲವಾರು ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಬದಲು ಬುದ್ಧಿವಂತ ವಿದ್ಯಾರ್ಥಿಗಳ ನೋದಣಿ ಸಂಖ್ಯೆ ನಮೂದಿಸಿರುವ ಅಂಶವನ್ನು ಸಚಿವರು ದಾಖಲೆ ಸಮೇತ ವಿವರಿಸಿದರು. 
ಇನ್ನೂ ಹಲವು ವಿದ್ಯಾರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯದಲ್ಲಿ 70:30ರ ಅನುಪಾತದಲ್ಲಿ ಲಿಖಿತ ಹಾಗೂ ಪ್ರಯೋಗ ಪರೀಕ್ಷೆ ಇರುತ್ತದೆ. ಪ್ರಯೋಗ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ, ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 21 ಅಂಕ ಬರದಿದ್ದಲ್ಲಿ ಅಂತಹ ವಿದ್ಯಾರ್ಥಿಯ ಫಲಿತಾಂಶವನ್ನು ಅನುತ್ತೀರ್ಣ ಎಂದು ಪ್ರಕಟಿಸಲಾಗುವುದು, ಇಂತಹ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಸಚಿವರು ತಿಳಿಸಿದರು. 
ಪ್ರತಿ ವರ್ಷ ಇಂತಹ ಹಲವಾರು ನಿದರ್ಶನಗಳು ದಾಖಲಾಗಿವೆ, ಕಳೆದ ಐದು ವರ್ಷಕ್ಕೆ ಇದರ ಪ್ರಮಾಣಕ್ಕೆ ಹೋಲಿಸಿದಲ್ಲಿ ಈ ವರ್ಷ ಇದರ ಸಂಖ್ಯೆ ಅತ್ಯಂತ ಕಡಿಮೆ ಇದೆ.
ವಿವಿಧ ಮಾದರಿಯ ವಿಕಲಚೇತನರ ಪರೀಕ್ಷಯಲ್ಲೂ ಕೆಲವು ನ್ಯೂನತೆಗಳು ದಾಖಲಾಗಿವೆ, ಈ ಬಗ್ಗೆಯೂ ಇಲಾಖೆ ವರಿಷ್ಠರು ವಿಚಾರಣೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು. 
ದ್ವಿತೀಯ ಪಿಯು ಉತ್ತರ ಪತ್ರಿಕೆ ಕುರಿತಂತೆ ವಿದ್ಯಾರ್ಥಿಗಳು ಬಯಸಿದಲ್ಲಿ ಮರುಮೌಲ್ಯಮಾಪನ, ಅಂಕಪಟ್ಟಿ ಮರು ಎಣಿಕೆ, ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಯ ಫೋಟೋಪ್ರತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಅದಕ್ಕಾಗಿ ಇಲಾಖೆಗೆ ಅರ್ಜಿ ಸಲ್ಲಿಸಬೇಕು ಎಂದು ಮಂಡಳಿ ತಿಳಿಸಿದೆ. 
ಅಗತ್ಯವಾದ ಅರ್ಜಿಗಳು ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ವೆಬ್ ಸೈಟ್-ಡಿಡಿಡಿ.ಟ್ಠಛಿ.ಚ್ಟ.್ಞಜ್ಚಿ.ಜ್ಞಿ 
ನಲ್ಲಿ ಲಭ್ಯವಿವೆ. . ಆಚ್ಞಜಚ್ಝಟ್ಟಛಿಘೆಉ, ಓಚ್ಟ್ಞಠಿಘೆಉ ಕೇಂದ್ರಗಳಿರುವಲ್ಲಿ (ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮೈಸೂರು, ಮಂಗಳೂರು, ತುಮಕೂರು, ದಾವಣಗೆರೆ, ಬಳ್ಳಾರಿ,ಗುಲ್ಬರ್ಗಾ ಮತ್ತು ಶಿವಮೊಗ್ಗ)ಅರ್ಜಿ ಸಲ್ಲಿಸಿ, ನಿಗದಿತ ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಿ ಸ್ವೀಕೃತಿ ಪಡೆಯಬಹುದು ಎಂದು ಹೇಳಿದೆ. 
ಡಿಡಿಡಿ.ಚಿಚ್ಞಜಚ್ಝಟ್ಟಛಿಟ್ಞಛಿ.ಜಟ.ಜ್ಞಿ 
ವೆಬ್ ಸೈಟ್ ಮೂಲಕ ವಿದ್ಯಾರ್ಥಿಗಳು ಮರುಮೌಲ್ಯಮಾಪನ/ ಅಂಕಪಟ್ಟಿ ಮರು ಎಣಿಕೆ/ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಯ ಫೋಟೋಪ್ರತಿಗೆ ಟ್ಞ್ಝಜ್ಞಿಛಿ ಮೂಲಕವೇ ಅರ್ಜಿ ಸಲ್ಲಿಕೆಗೆ ಮತ್ತು ಶುಲ್ಕ ಸಂದಾಯ ಮಾಡಲು ವ್ಯವಸ್ಥೆ ಮಾಡಲಾಗಿದೆ. 
ಇತರೆಡೆಯಲ್ಲಿರುವವರು ಭರ್ತಿ ಮಾಡಿದ ಅರ್ಜಿಗಳನ್ನು ಮಂಡಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಮರುಮೌಲ್ಯ ಮಾಪನ ಮತ್ತು ಅಂಕಪಟ್ಟಿ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಕಡೆಯದಿನ ಈ ತಿಂಗಳ 30 ಮತ್ತು ಉತ್ತರ ಪತ್ರಿಕೆಯ ಫೋಟೋಪ್ರತಿ ಕೋರಿ ಅರ್ಜಿ ಸಲ್ಲಿಸಲು ಈ ತಿಂಗಳ ಕಡೆಯ ದಿನವಾಗಿದೆ. 
ಈ ಬಗ್ಗೆ ಹೆಚ್ಚಿನ ಯಾವುದೇ ವಿವರಗಳಿಗೆಇಲಾಖೆಯ ವೆಬ್ ಸೈಟ್-ಡಿಡಿಡಿ.ಟ್ಠಛಿ.ಚ್ಟ.್ಞಜ್ಚಿ.ಜ್ಞಿಗೆ ಭೇಟಿ ನೀಡಿ ಅಥವಾ ಸಹಾಯವಾಣಿ ಸಂಖ್ಯೆ 23083900ಕ್ಕೆ ಕರೆಮಾಡಿ ಸಹಾಯ ಪಡೆಯಬಹುದಾಗಿದೆ. ಈ ಕೇಂದ್ರವು ಬೆಳಿಗ್ಗೆ 8.00ಗಂಟೆಯಿಂದ ಸಂಜೆ 6.00ಗಂಟೆವರೆಗೆ ಕಾರ್ಯ ನಿರ್ವಹಿಸುತ್ತದೆ.

For North Karnataka News visit www.uksuddi.in

Comments