UK Suddi
The news is by your side.

IPL-8: ಮುಂಬೈ ಇಂಡಿಯನ್ಸ್ ಚಾಂಪಿಯನ್

ಕೋಲ್ಕತ: ಐಪಿಎಲ್ 8ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್
ವಿರುದ್ಧ 41ರನ್​ಗಳ ಭರ್ಜರಿ ಗೆಲುವು ಪಡೆಯುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಟ್ರೋಫಿ
ಎತ್ತಿ ಹಿಡಿದಿದೆ.

ಮುಂಬೈ ಇಂಡಿಯನ್ಸ್ ನೀಡಿದ 203 ರನ್​ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್
20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಚೆನ್ನೈ ಪರ ಡ್ವೈನ್
ಸ್ಮಿತ್ (57), ಸುರೇಶ್ ರೈನಾ (28), ಮೋಹಿತ್ ಶರ್ಮಾ (21) ಮತ್ತು ಮಹೇಂದ್ರ ಸಿಂಗ್
ಧೋನಿ (18) ಮಾತ್ರ ಸ್ವಲ್ಪ ಉತ್ತಮ ಪ್ರದರ್ಶನ ನೀಡಿದರು. ಉಳಿದ ಬ್ಯಾಟ್ಸಮನ್​ಗಳು
ಉತ್ತಮ ಮೊತ್ತ ಗಳಿಸದ ಕಾರಣ ಚೆನ್ನೈಗೆ ಬೃಹತ್ ಮೊತ್ತ ಬೆನ್ನತ್ತಲು ಸಾಧ್ಯವಾಗಲಿಲ್ಲ.
ಮುಂಬೈ ಇಂಡಿಯನ್ಸ್ ಪರ ಮಿಷಲ್ ಮೆಕ್​ಲೆಗನ್ 25 ಕ್ಕೆ 3, ಮಾಲಿಂಗಾ 25 ಕ್ಕೆ 2,
ಹರಭಜನ್ ಸಿಂಗ್ 34 ಕ್ಕೆ 2 ವಿಕೆಟ್ ಪಡೆದು ಮಿಂಚಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಬಂದ ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 5
ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿದ್ದು, ಚೆನ್ನೈಗೆ ಗೆಲ್ಲಲು 203 ರನ್ ಗುರಿ
ನೀಡಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ ಮುಂಬೈಗೆ ಆರಂಭದಲ್ಲೇ ಆಘಾತ ಎದುರಾಯಿತು.
ಆರಂಭಿಕ ಆಟಗಾರ ಪಾರ್ಥಿವ್ ಪಟೇಲ್ ಮೊದಲ ಓವರ್​ನಲ್ಲೇ ರನ್ ಔಟ್ ಆಗುವ ಮೂಲಕ ಮುಂಬೈಗೆ
ಹಿನ್ನಡೆಯಾಯಿತು. ಈ ಹಂತದಲ್ಲಿ ಜತೆಯಾದ ಮುಂಬೈ ನಾಯಕ ರೋಹಿತ್ ಶರ್ಮಾ (50) ಮತ್ತು
ಲಿಂಡಲ್ ಸಿಮೆನ್ಸ್ (68) ತಂಡಕ್ಕೆ ಆಸರೆಯಾದರು. ಇವರು 2ನೇ ವಿಕೆಟ್​ಗೆ 119 ರನ್
ಗಳಿಸಿತು. 120 ರನ್ ಗಳಿಸಿದ್ದಾಗ ರೋಹಿತ್ ಶರ್ಮಾ ಮತ್ತು ಸಿಮೆನ್ಸ್ ಔಟಾಗುವ ಮೂಲಕ
ತಂಡ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕಿರಾನ್ ಪೊಲಾರ್ಡ್ (36)
ಮತ್ತು ಅಂಬಟಿ ರಾಯುಡು (36*) ತಂಡಕ್ಕೆ ಆಸರೆ ಒದಗಿಸಿ ತಂಡದ ಮೊತ್ತ ಹೆಚ್ಚಿಸಿದರು.
ಚೆನ್ನೈ ಪರ ಡ್ವೈನ್ ಬ್ರಾವೋ 36 ಕ್ಕೆ 2, ಡ್ವೈನ್ ಸ್ಮಿತ್ 17 ಕ್ಕೆ 1 ವಿಕೆಟ್
ಪಡೆದರು.

ಸಂಕ್ಷಿಪ್ತ ಸ್ಕೋರ್:

ಮುಂಬೈ ಇಂಡಿಯನ್ಸ್ 20 ಓವರ್ 202 ಕ್ಕೆ 5 (ಲಿಂಡಲ್ ಸಿಮೆನ್ಸ್ 68, ರೋಹಿತ್ ಶರ್ಮಾ
50, ಕಿರಾನ್ ಪೊಲಾರ್ಡ್ 36, ಅಂಬಟಿ ರಾಯುಡು 36*, ಬ್ರಾವೋ 36 ಕ್ಕೆ 2, ಡ್ವೈನ್
ಸ್ಮಿತ್ 17 ಕ್ಕೆ 1)

ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ 161 ಕ್ಕೆ 8 (ಡ್ವೈನ್ ಸ್ಮಿತ್ 57, ಸುರೇಶ್
ರೈನಾ 28, ಮೋಹಿತ್ ಶರ್ಮಾ 21, ಮಹೇಂದ್ರ ಸಿಂಗ್ ಧೋನಿ 18, ಮಿಷಲ್ ಮೆಕ್​ಲೆಗನ್ 25
ಕ್ಕೆ 3, ಮಾಲಿಂಗಾ 25 ಕ್ಕೆ 2, ಹರಭಜನ್ ಸಿಂಗ್ 34 ಕ್ಕೆ 2)

For North Karnataka News visit www.uksuddi.in

Comments