ಉತ್ತರ ಕರ್ನಾಟಕದಲ್ಲಿ ಅಸಾಧ್ಯ ಬಿಸಿಲು
ಹಗಲಿನ ಉಷ್ಣತೆ 45 ಡಿಗ್ರಿ ಸೆಲ್ಸಿಯಸ್ವರೆಗೂ ಏರುವುದರೊಂದಿಗೆ ಕರ್ನಾಟಕದ ಉತ್ತರ ಭಾಗ ಮತ್ತು ಕರಾವಳಿ ಪ್ರದೇಶ ಅಸಾಧ್ಯ ಬೇಸಿಗೆ ಬೇಗೆಯಿಂದ ತತ್ತರಿಸುತ್ತಿದೆ ಎಂದು ಅಧಿಕಾರಿಗಳು ಮಂಗಳವಾರ ಇಲ್ಲಿ ತಿಳಿಸಿದರು.
ಕಲಬುರ್ಗಿ ಮತ್ತು ಬೀದರ ಜಿಲ್ಲೆಗಳು ಅತ್ಯಂತ ಹೆಚ್ಚು ಬಿಸಿಲ ಬೇಗೆಗೆ ಒಳಗಾಗಿವೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಸಾಮಾನ್ಯವಾಗಿ ಈ ಜಿಲ್ಲೆಗಳಲ್ಲಿ ಈ ವೇಳೆಯಲ್ಲಿ ಹಗಲಿನ ಉಷ್ಣತೆ 40 ಡಿಗ್ರಿ ಸೆಲ್ಸಿಯಸ್ವರೆಗೆ ಏರುತ್ತದೆ.
ರಾಜಧಾನಿ ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿಯುವ ನಿರೀಕ್ಷೆಯಿದ್ದು ಗುಡುಗು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇರುತ್ತದೆ. ಮಂಗಳವಾರ ಇಲ್ಲಿ 33 ಡಿಗ್ರಿ ಸೆಲ್ಸಿಯ್ ಉಷ್ಣತೆ ಇತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
For North Karnataka News visit www.uksuddi.in