ಗೋಳ ಗುಮ್ಮಟ ಬಗ್ಗೆ ತಿಳಿಯಿರಿ
ಗೋಳ ಗುಮ್ಮಟ
ವಿಜಯಪುರ

ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ! ಹಾಗೆಯೆ ಇಲ್ಲಿರುವ “ಪಿಸುಗುಟ್ಟುವ ಶಾಲೆ”ಯಲ್ಲಿ ಅತಿ ಸಣ್ಣ ಶಬ್ದವೂ 37 ಮಿ ದೂರದಲ್ಲಿ ಸ್ಪಷ್ಟವಾಗಿ ಕೇಳಿ ಬರುತ್ತದೆ. ಇದರ ಹತ್ತಿರ ವಿಜಯಪುರ ಆದಿಲ್ ಶಾಹಿಗಳಿಗೆ ಸಂಬಂಧಿಸಿದ ವಸ್ತು ಸಂಗ್ರಾಹಾಲಯವು ಇದೆ. ವಿಜಯಪುರದ ಗೋಲಗುಂಬಜ್ ವಿಶ್ವಪ್ರಸಿದ್ಧಿಯನ್ನು ಹೊಂದಿದೆ. ವಿಶೀಷ್ಟ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ರಚನೆಯನ್ನು ‘ಗೋಲಗುಮ್ಮಟ’ವೆಂದು ಕೂಡ ಕರೆಯುವರು.
ಮೊಘಲ್ ಸಾಮ್ರಾಜ್ಯದ ದೊರೆ ಮಹಮ್ಮದ್ ಆದಿಲ್ ಶಾಹ ನಿರ್ಮಿಸಿದ ಈ ಗುಮ್ಮಟವು ವಿಶ್ವದಲ್ಲೇ ಎರಡನೇ ದೊಡ್ಡದಾದ ಗುಮ್ಮಟವೆಂದು ಹೆಸರಾಗಿದೆ. ವಿಜಯಪುರದ ಸುಲ್ತಾನನಾಗಿದ್ದ ಮಹಮ್ಮದ್ ನು ಕ್ರಿ.ಶ. 1490 ರಿಂದ ಕ್ರಿ.ಶ.1696 ರ ಸಮಯದಲ್ಲಿ ಆಳ್ವಿಕೆ ನಡೆಸುತ್ತಿದ್ದನು. ಮೊಘಲರ ಪ್ರಸಿದ್ಧ ವಾಸ್ತುಶಿಲ್ಪಿ ಯಾಕೂತ್ ಎಂಬುವನು ಈ ಗುಮ್ಮಟವನ್ನು ಅನೇಕ ಕಾರ್ಮಿಕರೊಂದಿಗೆ ಕಟ್ಟಿದನು. 44 ಮೀಟರ್ ವ್ಯಾಸವುಳ್ಳ ಈ ಗುಮ್ಮಟವು ಯಾವುದೇ ಆಧಾರವಿಲ್ಲದೇ ಈ ಕಟ್ಟಡದಲ್ಲಿ ವಿಶೇಷ ವಾಸ್ತು ವಿನ್ಯಾಸ ದೊಂದಿಗೆ ನಿರ್ಮಾಣವಾಗಿರುವುದು ಇಂದಿಗೂ ಹಲವರ ಹುಬ್ಬೇರಿಸುತ್ತದೆ.
ಈ ಗುಮ್ಮಟದ ಕಟ್ಟಡದೊಳಗೆ ಹೋದರೆ ಏನೇ ಮಾತನಾಡಿದರೂ ಏಳು ಬಾರಿ ಪ್ರತಿಧ್ವನಿಸುತ್ತದೆ. ಇದು ಇಂದಿಗೂ ಎಲ್ಲರಿಗೂ ಅಚ್ಚರಿಯ ವಿಷಯವಾದರೂ ಪ್ರವಾಸಿಗರು ಇಲ್ಲಿ ಉಂಟಾಗುವ ಪ್ರತಿಧ್ವನಿಯನ್ನು ಕೇಳಿಯೇ ಅನುಭವಿಸಬೇಕು. ಮೊಘಲರ ರಾಜ ಆದಿಲ್ ಶಾಹ ಮತ್ತು ಆತನ ರಾಣಿ ಈ ಗುಮ್ಮಟದಲ್ಲಿ ಪರಸ್ಪರ ಮಾತನಾಡಲು ಈ ಪ್ರತಿಧ್ವನಿಯನ್ನು ಬಳಸುತ್ತಿದ್ದರು ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.
ಅಲ್ಲದೇ ಇಲ್ಲಿ ನಡೆಯುತ್ತಿರುವ ಸಂಗೀತ ಕಾರ್ಯಕ್ರಮಗಳನ್ನು ಕೇಳಲು ಆಗಮಿಸುವ ಎಲ್ಲರಿಗೂ ಎಲ್ಲ ಕಡೆಗಳಿಂದಲು ಕೇಳುವಂತಾಗುತ್ತಿತ್ತು ಎಂಬುದು ದಾಖಲಾಗಿದೆ. ಈ ಮಸೀದಿಯು 8 ಅಂತಸ್ತುಗಳ ಕಟ್ಟಡವಾಗಿದ್ದು ನಾಲ್ಕು ಸ್ತಂಭಗೋಪುರಗಳನ್ನೊಳಗೊಂಡಿದೆ. ಅವುಗಳಿಗೆ ವಿಶೀಷ್ಠ ರೀತಿಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಸುಂದರವಾದ ಹೂದೋಟದಲ್ಲಿ ನಿರ್ಮಾಣಗೊಂಡ ಈ ಗೋಲಗುಮ್ಮಟ ಕಟ್ಟಡವು 1700 ಸೆ.ಮೀ.ವಿಸ್ತೀರ್ಣ ಹೊಂದಿದೆ. 51 ಮೀಟರ್ ಎತ್ತರವಿದೆ.
For North Karnataka News visit www.uksuddi.in