UK Suddi
The news is by your side.

ಮುಸ್ಲಿಂ ವ್ಯಕ್ತಿಯ ಮನೆಯಲ್ಲಿ ಹಿಂದೂ ದೇವತೆಗಳು..!

ಬಾಗಲಕೋಟೆ: ಜಿಲ್ಲೆಯಲ್ಲೊಬ್ಬರು ಮುಸ್ಲಿಂ ವ್ಯಕ್ತಿ ಇದ್ದಾರೆ. ಆದರೆ ಇವರು ಮುಸ್ಲಿಂ ಎನ್ನುವ ಯಾವ ಕುರುಹು ಇವರ ಮನೆಯಲ್ಲಿಲ್ಲ ಕಾರಣ ಇವರ ಮನೆಯಲ್ಲಿ ಕಾಣಲು ಸಿಗುವುದು ಕೇವಲ ಹಿಂದೂ ದೇವರಾದ ಈಶ್ವರನ ಲಿಂಗಗಳು. ನಿತ್ಯವೂ ಇವರ ಮನೆಯಲ್ಲಿ ಹಿಂದೂ ದೇವತೆಗಳಿಗೆ ಪೂಜೆ ನಡೆಯುತ್ತದೆ.

ಹೌದು. ಜಿಲ್ಲೆಯ ಬೀಳಗಿ ತಾಲೂಕಿನ ಎಸ್‍ಕೆ ಕೊಪ್ಪ ಗ್ರಾಮದವರಾದ ಅಬ್ದುಲ್ ರಝಾಕ್ ನೂರಪ್ಪನೂರ್ ತಲೆ-ತಲಾಂತರದಿಂದ ಹಿಂದೂಗಳ ಭಕ್ತಿಯ ಪ್ರತೀಕವಾದ ಈಶ್ವರಲಿಂಗವನ್ನು ತಯಾರಿಸುತ್ತಿದ್ದಾರೆ. ಪ್ರತಿ ದಿನವು ಚಿಕ್ಕ-ಚಿಕ್ಕ ಲಿಂಗವನ್ನು ತಯಾರಿಸಿ ಜಾತ್ರೆ ಹಾಗೂ ತೀರ್ಥ ಕ್ಷೇತ್ರಗಳಲ್ಲಿ ಮಾರಾಟ ಮಾಡುತ್ತಾರೆ.
ಸುಮಾರು ನೂರಾರು ವರ್ಷಗಳಿಂದ ತಮ್ಮ ಹಿರಿಯರು ಮಾಡುತ್ತಿದ್ದ ಬಂದಿರುವ ಈ ಕಾಯಕವನ್ನು ಅಬ್ದುಲ್ ರಝಾಕ್ ಮುಂದುವರೆಸಿಕೊಂಡು ಬಂದಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಇವರ ತಯಾರಿಸುವ ಲಿಂಗ ಉತ್ತಮ ಬೆಲೆಯಲ್ಲಿ ಮಾರಾಟವಾಗುತ್ತವೆ.
ಅಲ್ಲದೇ ಇವರ ಮನೆಯಲ್ಲಿ ನಿತ್ಯವೂ ಹಿಂದೂ ದೇವತೆಗಳಿಗೆ ಪೂಜೆ ನಡೆಯುತ್ತದೆ. ಜೊತೆಗೆ ಇವರು ಪ್ರತಿನಿತ್ಯ ನಮಾಝ್ ಕೂಡಾ ಮಾಡುತ್ತಾರೆ. ಒಟ್ಟಿನಲ್ಲಿ ಜಾತಿ-ಧರ್ಮ ಎಂದು ಕಿತ್ತಾಡುವ ಜನರ ಮಧ್ಯೆ ಅಬ್ದುಲ್ ಮಾದರಿಯಾಗಿ ಕಾಣುತ್ತಾರೆ.
For North Karnataka News visit www.uksuddi.in

Comments