ನಿಂಬೆ ಹಣ್ಣು ನಂಬಿ…
ಸಿಟ್ರಸ್ ಆವ್ರಾಂಟಿ ಪೋಲಿಯಾ ಎಂಬ ವೈಜ್ಞಾನಿಕ ಹೆಸರಿರುವ ಲಿಂಬೆ ರೊಟೇಸಿ ಎಂಬ ಸಸ್ಯ ವರ್ಗಕ್ಕೆ ಸೇರಿದೆ. ಜೇರುನಾರಂಗಿ, ಇಲಿಮಿಚ್ಛೆ ಎಂದೂ ಕರೆಯುವ ಇದರ ತವರೂರು ಪೂರ್ವ ಏಷ್ಯಾ ದ್ವೀಪಗಳು. ಹೆಚ್ಚಾಗಿ ಉತ್ತರ ಭಾರತದ ಕಾಡುಗಳಲ್ಲಿ ವಿಶೇಷವಾಗಿ ಗುರುತಿಸಿದ್ದರಿಂದ ಇದರ ತವರೂರು ಭಾರತವೇ ಆಗಿದೆ.
ವೈದ್ಯ ಕ್ಷೇತ್ರದಲ್ಲಿ ವಿಫುಲವಾಗಿ ಬಳಸುವ ಈ ನಿಂಬೆ ಹಣ್ಣಲ್ಲಿ ‘ಸಿ’ ಜೀವಸತ್ವ ಯಥೇಚ್ಛವಾಗಿದೆ. ದೈನಂದಿನ ಅಡುಗೆಯಲ್ಲಿ ಬಳಸುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸುವುದರೊಂದಿಗೆ ಸ್ಕರ್ವಿ ಎಂಬ ಮೂಳೆ ರೋಗ ಬರದಂತೆ ತಡೆಬಲ್ಲದು. ಸೌಂದರ್ಯ ವರ್ಧಕವಾಗಿ ಬಳಸುವುದರಿಂದ ವಿಶೇಷವಾಗಿ ಸ್ತ್ರೀ ಪ್ರೀತಿಗೆ ಪಾತ್ರವಾಗಿದೆ.
ಒಣಗಿದ ನಿಂಬೆ ಸಿಪ್ಪೆಯನ್ನು ಪುಡಿಯೊಂದಿಗೆ ಅರಿಶಿನ ಬೆರೆಸಿ ಹಚ್ಚುವುದರಿಂದ ಮೊಡವೆ, ಇಸುಬು ಮೊದಲಾದ ಚರ್ಮ ರೋಗಗಳು ನಿವಾರಣೆಯಾಗುತ್ತವೆ. ಚರ್ಮದ ಕಾಂತಿಯೂ ಹೆಚ್ಚುತ್ತದೆ. ತಲೆ ಕೂದಲು ಉದುರುವುದು ಮತ್ತು ತಲೆ ಹೊಟ್ಟು ಸಮಸ್ಯೆ ಗಂತೂ ರಾಮಬಾಣ.
ಪಾನಕ ಮಾಡಿ ಕುಡಿದರೆ ಟೈಫಾಯಿಡ್, ನ್ಯೂಮೋನಿಯಾದಂಥ ಅನೇಕ ಅಪಾಯಕಾರಿ ಕಾಯಿಲೆಗಳು ಗುಣಮುಖಗೊಳ್ಳುವುದರೊಂದಿಗೆ ರೋಗಿಯಲ್ಲಿ ಚೇತರಿಕೆ ಕಂಡು ಬರುತ್ತದೆ. ಅಲ್ಲದೇ ಇದರ ರಸ ದೇಹದಲ್ಲಿ ಉತ್ಪತ್ತಿಯಾಗುವ ಸೂಕ್ಷ್ಮ ವಿಷಕ್ರಿಮಿಗಳನ್ನು ನಾಶ ಪಡಿಸುವುದಲ್ಲದೇ ಅನೇಕ ಚರ್ಮ ರೋಗಗಳಿಗೆ ಪರಿಣಾಮಕಾರಿ ಮದ್ದು.
-ಲತಾ ಶ್ರೀ ಅರೋಲಿ
courtesy: Kannada Prabha