UK Suddi
The news is by your side.

ಪಂಚಾಯ್ತಿ ಚುನಾವಣೆ ಗೆದ್ದ ಡಿಗ್ರಿ ಯುವಕ

ಬಳ್ಳಾರಿ : ಬಳ್ಳಾರಿ ಜಿಲ್ಲೆ ಕೂಡ್ಲಿಗಿಯ ಚೌಡಾಪುರ ಗ್ರಾಮ ಪಂಚಾಯಿತಿ 1 ನೇ ವಾರ್ಡ್‌ನ ಸದಸ್ಯನ ವಯಸ್ಸು 24. ಹೆಸರು ಉಗ್ರೇಶ. ಡಿಗ್ರಿ ಮೊಟಕು ಗೊಂಡಿದೆ. ಅದಕ್ಕೆ ಬಡತನವೇ ಕಾರಣ. ಬಡತನ ಒರೆಸಿಕೊಳ್ಳಲು ದಲಾಲಿ ಅಂಗಡಿಯಲ್ಲಿ ದುಡಿತ. ಲೈಬ್ರರಿ, ಹತ್ತದ ಬೀದಿ ದೀಪಗಳು, ಅಶುದ್ಧ ಕುಡಿಯುವ ನೀರು, ಗಬ್ಬೆದ್ದು ನಾರುವ ಚರಂಡಿಗಳು ಇವುಗಳ ಜೊತೆ ಬದುಕುತ್ತಿದ್ದ ಉಗ್ರೇಶಗೆ ಈ ಅವ್ಯವಸ್ಥೆಯ ಬಗ್ಗೆ ಕೆರಳಿಕೆ ಇತ್ತು. ಆದರೆ ಪ್ರಯೋಜನ ಇರಲಿಲ್ಲ. ಮನವಿಗಳೆಲ್ಲ ಮೂಲೇ ಗುಂಪು. ಅದಕ್ಕೆ ಈ ಸಲದ ಚುನಾವಣೆಗೆ ನಿಂತರು. ಯಂಡ, ಸಾರಾಯಿ, ದುಡ್ಡು, ಸೀರೆ ಯಾವ ಆಮಿಷ ಒಡ್ಡಲಿಲ್ಲ. ಕೊಟ್ಟಿದ್ದು ಭ್ರಷ್ಟಾಚಾರ ನಿರ್ಮೂಲನೆ, ವ್ಯವಸ್ಥೆಯ ಸುಧಾರಣೆಯ ಭರವಸೆ. ಒಂದು ರೂ. ಖರ್ಚು ಮಾಡಲಿಲ್ಲ. ಜನ ನಂಬಿ ಗೆಲ್ಲಿಸಿದರು.
For North Karnataka News visit www.uksuddi.in

Comments