UK Suddi
The news is by your side.

‘ಗೇಟ್’ ಹಾಗೂ ‘ವೈದ್ಯಕೀಯ’ ಪ್ರವೇಶ ಪರೀಕ್ಷೆ ಸಾಧಕರು

ಮಹಾಲಿಂಗಪುರ : ಸ್ಥಳೀಯ ಮಹಾಲಿಂಗೇಶ ಸಾತಲಗಾಂವ ಅವರಿಗೆ ರೂರ್ಕಿಯ ಐಐಟಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಎಂ.ಟೆಕ್ ಹಾಗೂ ಡಾ.ಪೂರ್ಣಿಮಾ ಸಾತಲಗಾಂವ ಅವರಿಗೆ ಬೆಂಗಳೂರಿನ ಬೆಂಗಳೂರ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ನೇತ್ರತಜ್ಞ ಕೋರ್ಸ ಪ್ರವೇಶಕ್ಕೆ ಅವಕಾಶ ದೊರೆತಿದೆ.
ಈರ್ವರೂ ಪ್ರಸಕ್ತ ಸಾಲಿನಲ್ಲಿ ಜರುಗಿದ ಅಖಿಲ ಭಾರತ ಮಟ್ಟದ ‘ಗೇಟ್’ ಹಾಗೂ ‘ವೈದ್ಯಕೀಯ’ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದು ಸರ್ಕಾರಿ ಕೋಟಾದ ಫ್ರೀ ಸೀಟ್ ಜೊತೆಗೆ ಸ್ಟೆಯಫಂಡ ಧನಕ್ಕೆ ಭಾಜನರಾಗಿದ್ದಾರೆ.
ಡಾ.ಪೂರ್ಣಿಮಾ ತನ್ನ ಎಂ.ಬಿ.ಬಿ.ಎಸ್. ಪದವಿಯನ್ನು ಬೆಳಗಾವಿ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಹಾಗೂ ಮಹಾಲಿಂಗೇಶ ವಿಜಯಪುರ ಸೈನಿಕ್ ಶಾಲೆಯಲ್ಲಿ ಪಿಯುಸಿವರೆಗೆ ಓದು ಮುಗಿಸಿ ನಂತರ ಬೆಳಗಾವಿಯ ಗೋಗಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪೂರೈಸಿದರು. ಇಬ್ಬರೂ ತಮ್ಮ ಪ್ರಾಥಮಿಕ ವ್ಯಾಸಂಗವನ್ನು ಕನ್ನಡ ಮಾಧ್ಯಮದಲ್ಲಿಯೇ ಇಲ್ಲಿಯ ಬಸವಾನಂದ ಶಾಲೆಯಲ್ಲಿ ಓದಿದವರು.
ಕಳೆದ ಒಂದು ವರ್ಷದಿಂದ ಸತತ ಕಠಿಣ ಪರಿಶ್ರಮದಲ್ಲಿ ತೊಡಗಿದ ತಮಗೆ ಅಖಿಲ ಭಾರತ ಮಟ್ಟದ ಪ್ರತಿಷ್ಠಿತ ಕಾಲೇಜುಗಳಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ದೊರಕಿದ್ದು ತುಂಬಾ ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
For North Karnataka News visit www.uksuddi.in

Comments