UK Suddi
The news is by your side.

ಗಿನ್ನೆಸ್ ದಾಖಲೆಗೆ ರಾಜಪಥ ಯೋಗ ದಿನಾಚರಣೆ

 

ಪ್ರಥಮ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ದೆಹಲಿಯ ರಾಜಪಥದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಾಣುವ ಜತೆಗೆ, ಗಿನ್ನೆಸ್ ರೆಕಾರ್ಡ್​ನಲ್ಲಿ ಸಹ ಸೇರ್ಪಡೆಯಾಗಿದೆ.
84 ದೇಶಗಳ ಪ್ರಜೆಗಳನ್ನು ಒಳಗೊಂಡಂತೆ 35,985 ಜನರು ಒಂದೇ ಸ್ಥಳದಲ್ಲಿ ಯೋಗಾಸನ ಪ್ರದರ್ಶಿಸುವ ಮೂಲಕ ಈ ವಿಶಿಷ್ಟ ದಾಖಲೆ ನಿರ್ಮಾಣವಾಗಿದೆ. ಇದೊಂದು ಹೆಮ್ಮೆಯ ವಿಚಾರವಾಗಿದ್ದ ರಾಜಪಥದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 2 ದಾಖಲೆಗಳನ್ನು ನಿರ್ಮಿಸಿದೆ ಎಂದು ಆಯುಷ್ ಸಚಿವ ಶ್ರೀಪಾದ್ ನಾಯಕ್ ತಿಳಿಸಿದ್ದಾರೆ.
ಈ ಮೊದಲ 2005ರ ನವೆಂಬರ್ 19ರಂದು 362 ಶಾಲೆಗಳ 29,973 ವಿದ್ಯಾರ್ಥಿಗಳು ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗಾಸನ ಪ್ರದರ್ಶಿಸಿದ್ದರು.
ಗಿನ್ನೆಸ್ ದಾಖಲೆಯ ಅಧಿಕಾರಿಗಳು ಭಾನುವಾರದ ಕಾರ್ಯಕ್ರಮದಲ್ಲಿ ಹಾಜರಿದ್ದು, ಭಾಗವಹಿಸಿದ್ದ ಜನರ ಸಂಖ್ಯೆ ಮುಂತಾದ ವಿಚಾರಗಳನ್ನು ದಾಖಲಿಸಿಕೊಂಡಿದ್ದರು.
For North Karnataka News visit www.uksuddi.in

Comments