ರಾಯಬಾಗದಲ್ಲಿ ಇಬ್ಬರು ನಕಲಿ ಆರ್ಟಿಒಗಳ ಬಂಧನ
ಬಂಧಿತರನ್ನು ಸುನೀಲ ಹೆಗಡೆ, ಗಣೇಶ ಗಾವರವಾಡ ಎಂದು ಗುರುತಿಸಲಾಗಿದೆ. ಬಂಧಿತರು ತಾವು ಕೆಎಸ್ಆರ್ಟಿಸಿಯ ಸಂಚಾರಿ ನೀರೀಕ್ಷಕರು ಎಂದು ಹೇಳಿಕೊಂಡು ಬಸ್ಸೊಂದನ್ನು ತಡೆದು ಟಿಕಟ್ ನೀಡಿರುವ ಕುರಿತು ತಪಾಸಣೆ ಮಾಡಲು ಮುಂದಾಗಿದ್ದಾರೆ. ಟಿಕೆಟ್ ತಪಾಸಣೆ ಮಾಡಿದ ನಂತರ ಬಸ್ಸಿನ ನಿರ್ವಾಹಕನಿಗೆ ನೀನು ಸರಿಯಾಗಿ ಟಿಕೆಟ್ ನೀಡಿಲ್ಲ. ನಿನಗೆ ದಂಡ ವಿಧಿಸಲಾಗುವುದು ಎಂದು ದಬಾಯಿಸಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ತಾವು ಸರಿಯಾಗಿ ಟಿಕೆಟ್ ನೀಡಿದರೂ ಇವರು ಹಣ ಕೇಳುತ್ತಿರುವುದು ನಿರ್ವಾಹಕನಿಗೆ ಸಂಶಯ ಮೂಡಿದೆ. ನಂತರ ಅನುಮಾನಗೊಂಡ ಚಾಲಕ ಮತ್ತು ನಿರ್ವಾಹಕ ಇಬ್ಬರೂ ಬಸ್ಸನ್ನು ಮಧ್ಯದಲ್ಲಿ ನಿಲ್ಲಿಸದೆ ರಾಯಬಾಗ ಡಿಪೋಗೆ ತೆಗೆದುಕೊಂಡು ಬಂದಿದ್ದಾರೆ. ಡಿಪೋ ಮ್ಯಾನೇಜರ್ ಎ.ಆರ್.ಛಬ್ಬಿ ಅವರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.
ನಕಲಿ ವ್ಯಕ್ತಿಗಳು ಇಬ್ಬರು ನಕಲಿ ಐಡೆಂಟಿ ಕಾರ್ಡ್ ಸಹ ಹೊಂದಿದ್ದರು ಎನ್ನಲಾಗುತ್ತಿದೆ. ಅವರು ಇಬ್ಬರ ವ್ಯಕ್ತಿಗಳನ್ನು ನೋಡಿದ ತಕ್ಷಣ ಇವರು ನಕಲಿ ಇದ್ದಾರೆ ಎಂದು ಗೊತ್ತಾಗಿದೆ. ನಂತರ ಅವರನ್ನು ರಾಯಬಾಗ ಪೊಲೀಸರು ವಶಕ್ಕೆ ನೀಡಿದ್ದಾರೆ. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Eenadu