ಜಪಾನ್ನಲ್ಲಿ ಭೂಕಂಪನ
ಜಪಾನ್ನಲ್ಲಿ ಮಂಗಳವಾರ ಸಂಜೆ ಹೊತ್ತಿಗೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.9ರಷ್ಟು ದಾಖಲಾಗಿದೆ. ಆದರೆ ಸದ್ಯದ ಮಾಹಿತಿ ಪ್ರಕಾರ ಸುನಾಮಿ ಭೀತಿ ಇಲ್ಲ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ.
ಭೂಮಿಯಿಂದ ಸುಮಾರು 480 ಕಿಲೋ ಮೀಟರ್ ಆಳದಲ್ಲಿ ಕಂಪನ ಸಂಭವಿಸಿದ ಕಾರಣ ಹೆಚ್ಚೇನು ಹಾನಿ ಸಂಭವಿಸಿರಬಹುದಾದ ಸಾಧ್ಯತೆ ಇಲ್ಲ ಎಂದು ಜಪಾನ್ ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ. ಸ್ಥಳೀಯ ಮಾಧ್ಯಮ ವರದಿಯ ಪ್ರಕಾರ ಟೋಕಿಯೊದಿಂದ 1000 ಕಿ.ಮೀ. ದೂರದ ಪೆಸಿಫಿಕ್ ಮಹಸಾಗರದ ಒಗಸ್ವಾರಾ ದ್ವೀಪ ಪ್ರದೇಶದಲ್ಲಿ ಕಂಪನ ಕೇಂದ್ರಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
For North Karnataka News visit www.uksuddi.in