UK Suddi
The news is by your side.

ಶ್ಯಾಮಾ ಪ್ರಸಾದ ಮುಖರ್ಜಿ

ಶ್ಯಾಮಾ ಪ್ರಸಾದ ಮುಖರ್ಜಿ ಅವರು ಒಬ್ಬ ಅಪ್ಪಟ ರಾಷ್ಟ್ರವಾದಿ.. ಸ್ವತಂತ್ರ ಭಾರತದ ಮೊದಲ ವಾಣಿಜ್ಯ ಹಾಗೂ ಕಾರ್ಖಾನೆ ವ್ಯವಹಾರಗಳ ಸಚಿವರಾಗಿ ಅದ್ಭುತ ಸೇವೆ ಸಲ್ಲಿಸಿದ ತಾಯಿ ಭಾರತಿ ಪುತ್ರ. ಕಾಂಗ್ರೆಸ್ಸಿನ ದ್ವಂದ್ವ ನೀತಿಯಿಂದ ಬೇಸತ್ತು ಹೊರ ಬಂದು ಭಾರತೀಯ ಜನ ಸಂಘವನ್ನು ಸ್ಥಾಪಿಸಿ ತೊಡೆ ತಟ್ಟಿದ ಛಲಗಾರ. ಜಮ್ಮು-ಕಷ್ಮೀರದಲ್ಲಿ 370 ನೆ ವಿಧಿಯನ್ನು ತೆಗೆದು ಹಾಕಬೇಕು “ಇಸ್ ದೇಶ ಮೆ ದೋ ವಿಧಾನ್, ದೋ ಪ್ರಧಾನ್, ದೋ ನಿಷಾನ್ ನಹೀ ಚಲೆಗಾ” ಎಂದು ಅಬ್ಬರಿಸಿದ ಹೋರಾಟಗಾರ. ಚಾಲ್ತಿಯಲ್ಲಿರುವ ಪರವಾನಿಗೆ ತೆಗೆದುಕೊಂಡು ಜಮ್ನು-ಕಾಷ್ಮೀರದಲ್ಲಿ ಪ್ರವೇಶ ಪಡೆಯಬೇಕೆಂಬ ಹೊಸ ಕಾನೂನಿನ ವಿರುದ್ಧ1953 ರಲ್ಲಿ prevailing permit ಇಲ್ಲದೆ ಕಷ್ಮಿರಕ್ಕೆ ತೆರಳುತ್ತರುವಾಗ ಅವರನ್ನು ಬಂಧಿಸಿ ಜೈಲಿನಲ್ಲಿಟ್ಟರು. ಅಲ್ಲಿಯೇ ಅವರ ಅಂತ್ಯವಾಗಿತ್ತು. ಒಬ್ಬ ಮಹಾನ್ ದೇಶವಾದಿ ನಮ್ಮನ್ನು ಅಗಲಿದ ದಿನ. ಶ್ಯಾಮ ಪ್ರಸಾದ ಮುಖರ್ಜಿ ಅವರ ಸ್ಮ್ರತಿ ದಿನದಂದು ಭಾರತಿ ಪುತ್ರನಿಗೆ ಶಥಃ ಶಥಃ ಪ್ರಣಾಮಗಳು.
ಅವರನ್ನು ಊಟದಲ್ಲಿ ಸಿಮೆಂಟ್ ಬೆರಸಿ ಕೊಲ್ಲಲಾಯಿತು ಎಂದು ಹೇಳಲಾಗುತ್ತದೆ….
For North Karnataka News visit www.uksuddi.in

Comments