UK Suddi
The news is by your side.

ಅಪ್ಪು 25ನೇ ಚಿತ್ರಕ್ಕೆ ‘ಚಕ್ರವ್ಯೂಹ’ ಎಂದು ನಾಮಕರಣ

ಯಶಸ್ವೀ ಕನ್ನಡ ಚಿತ್ರಗಳ ಶೀರ್ಷಿಕೆಗಳು ಪುನಃ ಬಳಕೆಯಾಗುವುದು ಹೊಸದೇನಲ್ಲ. ‘ನಾಗರ ಹಾವು’, ‘ಖೈದಿ’, ‘ರಣಧೀರ’, ‘ಕೋಟಿಗೊಬ್ಬ’.. ಹೀಗೆ. ಇದೀಗ ಈ ಸಾಲಿಗೆ ‘ಪವರ್ ಸ್ಟಾರ್’ ಪುನೀತ್ ರಾಜ್​ಕುಮಾರ್ ಚಿತ್ರವೊಂದು ಹೊಸ ಸೇರ್ಪಡೆ. ಅಪ್ಪು 25ನೇ ಚಿತ್ರಕ್ಕೆ ‘ಚಕ್ರವ್ಯೂಹ’ ಎಂದು ನಾಮಕರಣ ಮಾಡಲಾಗಿದೆ. ತಮಿಳು ನಿರ್ದೇಶಕ ಎಂ. ಸರವಣನ್ ಆಕ್ಷನ್- ಕಟ್ ಹೇಳುತ್ತಿರುವ ಸಿನಿಮಾವಿದು.
ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿಸಿರುವ ಶರವಣನ್ ನಿರ್ದೇಶನದ ಚಿತ್ರಕ್ಕೆ, ಇನ್ನೂ ಶೀರ್ಷಿಕೆ ಅಂತಿಮವಾಗಿರಲಿಲ್ಲ. ಇದೀಗ ‘ಚಕ್ರವ್ಯೂಹ’ ಫೈನಲ್ ಆಗಿದೆ. 32 ವರ್ಷಗಳ ಹಿಂದೆ ‘ರೆಬಲ್ ಸ್ಟಾರ್’ ಅಂಬರೀಷ್ ನಾಯಕತ್ವದಲ್ಲಿ ‘ಚಕ್ರವ್ಯೂಹ’ ತೆರೆಕಂಡಿತ್ತು. ಅಂದಿನ ಮಟ್ಟಿಗೆ ದೊಡ್ಡ ಯಶಸ್ಸು ಪಡೆದ ಈ ಚಿತ್ರದ ನಾಮಾವಳಿಯನ್ನು ಕನ್ನಡ ಪ್ರೇಕ್ಷಕ ಮತ್ತೊಮ್ಮೆ ಜಪಿಸಬಹುದು. ಮತ್ತೊಂದು ವಿಷಯವೆಂದರೆ, ‘ಪವರ್ ***’ ಚಿತ್ರಕ್ಕೆ ಸಂಗೀತ ನೀಡಿದ್ದ ಎಸ್.ಎಸ್. ಥಮನ್ ಈ ಚಿತ್ರಕ್ಕೂ ಬ್ಯಾಂಡ್ ಬಾರಿಸುತ್ತಿದ್ದಾರೆ. ಅಲ್ಲಿಗೆ 2ನೇ ಬಾರಿ ಪುನೀತ್ ಜೊತೆ ಕೆಲಸ ಮಾಡುವ ಅವಕಾಶ ಅವರದು. ‘ಯೆನ್ನೈ ಅರಿಂದಾಳ್’ ಖ್ಯಾತಿಯ ಅರುಣ್ ವಿಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲೋಹಿತ್ ಎಂಬುವವರು ನಿರ್ವಪಕರು.
For North Karnataka News visit www.uksuddi.in

Comments