UK Suddi
The news is by your side.

ವಿಜಯಪುರದಲ್ಲಿ 3 ಸಕ್ಕರೆ ಕಾರ್ಖಾನೆಗಳ ಜಪ್ತಿ

ವಿಜಯಪುರ: ಕಬ್ಬು ಬೆಳೆಗಾರರಿಗೆ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಯ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಸರ್ಕಾರ ವಿಜಯಪುರದಲ್ಲಿ 3 ಸಕ್ಕರೆ ಕಾರ್ಖಾನೆಗಳನ್ನು ಜಪ್ತಿ ಮಾಡಿದೆ.

ವಿಜಯಪುರ ತಾಲೂಕಿನ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಮೇಲೆ ತಹಸೀಲ್ದಾರ್ ಮಲ್ಲಿಕಾರ್ಜನ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ಕಾರ್ಖಾನೆಯನ್ನು ಜಪ್ತಿ ಮಾಡಿ, ಬೀಗ ಮುದ್ರೆ ಮಾಡಿದರು. ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ರೈತರಿಗೆ 12.4 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

ಇಂಡಿ ತಾಲೂಕಿನಲ್ಲಿ ತಹಸೀಲ್ದಾರ್ ರಾಜಶೇಖರ್ ನೇತೃತ್ವದಲ್ಲಿ ದಾಳಿ ನಡೆಸಿ ಹಿರೆಬೆವನೂರು ಗ್ರಾಮದ ಜ್ಞಾನಯೋಗಿ ಶಿಮಕುಮಾರ್ ಶುಗಸರ್ಸ ಕಾರ್ಖಾನೆಗೆ ಬೀಗಮುದ್ರೆ ಹಾಕಿದ್ದಾರೆ. ಈ ಕಾರ್ಖಾನೆಯು 27.92 ಕೋಟಿ ರೂ. ಬಾಕಿ ಉಳಿಸಿಕೊಂಡಿತ್ತು. ಇಂಡಿ ತಾಲೂಕಿನ ಜಮಖಂಡಿ ಶುಗರ್ಸ್ ಕಾರ್ಖಾನೆಗೂ ಬೀಗ ಮುದ್ರೆ ಹಾಕಲಾಗಿದ್ದು, ಈ ಕಾರ್ಖಾನೆ ರೈತರಿಗೆ 20.12 ಕೋಟಿ ರೂ. ಬಾಕಿ ಉಳಿಸಿಕೊಂಡಿತ್ತು.

ವಿಜಯವಾಣಿ

For North Karnataka News visit www.uksuddi.in

Comments