ಟೆಸ್ಟ್ ಇತಿಹಾಸದಲ್ಲೇ ಮೊದಲ ಹಗಲು ರಾತ್ರಿ ಪಂದ್ಯ ನ. 27ರಿಂದ
ಮೆಲ್ಬರ್ನ್: ಟೆಸ್ಟ್ ಕ್ರಿಕೆಟ್ನಲ್ಲಿ ಐತಿಹಾಸಿಕ ಬದಲಾವಣೆಯೊಂದಕ್ಕೆ ವೇದಿಕೆ ಸಿದ್ಧವಾಗಿದೆ. ನ.27ರಿಂದ ಡಿ.1ವರೆಗೆ ಟೆಸ್ಟ್ ಇತಿಹಾಸದಲ್ಲೇ ಮೊದಲ ಹಗಲುರಾತ್ರಿ ಪಂದ್ಯ ಅಡಿಲೇಡ್ನಲ್ಲಿ ನಡೆಯಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಮೂರು ಪಂದ್ಯಗಳ ಸರಣಿಯ ಮೂರನೇ ಪಂದ್ಯ ಇದಾಗಿರಲಿದೆ. ಪಂದ್ಯಗಳನ್ನು ಗುಲಾಬಿ ಚೆಂಡುಗಳೊಂದಿಗೆ ಆಡಲಾಗುವುದು.ಟೆಸ್ಟ್ನಲ್ಲಿ ಹಗಲುರಾತ್ರಿ ಪಂದ್ಯಗಳನ್ನು ಆಡಿಸುವ ಬಗ್ಗೆ ದೀರ್ಘ ಕಾಲದಿಂದ ಚರ್ಚೆಗಳು ನಡೆಯುತ್ತಲೇ ಇದ್ದವು. ಅದನ್ನು ಜಾರಿಗೊಳಿಸಲು ಆಸೀಸ್ ಮುಂದಾಗಿದೆ. ಟೆಸ್ಟ್ ಪಂದ್ಯಗಳನ್ನು ಮೈದಾನಕ್ಕೆ ಬಂದು ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗಿದೆ. ಇದನ್ನು ಹೇಗೆ ಸರಿಮಾಡಬಹುದು ಎಂಬುದಕ್ಕೆ ಉತ್ತರವಾಗಿ ಈ ಪ್ರಯೋಗಕ್ಕೆ ಆಸ್ಟ್ರೇಲಿಯಾ ಸಿದ್ಧವಾಗಿದೆ.
ಏಕೆ ಪ್ರಯೋಗ?
ಹಗಲು ಹೊತ್ತಿನಲ್ಲಿ ಪಂದ್ಯಗಳು ನಡೆಯುವುದರಿಂದ ಉದ್ಯೋಗಸ್ಥರು, ಮಕ್ಕಳು ಪಂದ್ಯಗಳನ್ನು ಮೈದಾನಕ್ಕೆ ಬಂದು ನೋಡಲು ಸಾಧ್ಯವಾಗುವುದಿಲ್ಲ. ಟೀವಿಯಲ್ಲೂ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಅಂತಹ ಪ್ರೇಕ್ಷಕರನ್ನು ಸೆಳೆಯಲು ಈ ಕ್ರಮ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯ ಕಾರ್ಯನಿರ್ವಾಹಕ ಜೇಮ್ಸ್ ಸದರೆಲಂಡ್ ಹೇಳಿದ್ದಾರೆ.
www.udayavani.com
For North Karnataka News visit www.uksuddi.in