UK Suddi
The news is by your side.

ವ್ಯಾಯಾಮ ಮಾಡುವುದರಿಂದ ನಿಯಂತ್ರಣಕ್ಕೆ ಬರುತ್ತೆ ಮಧುಮೇಹ

ವಾಷಿಂಗ್ಟನ್: ದಿನ ನಿತ್ಯ ವ್ಯಾಯಾಮ ಮಾಡುವವರಲ್ಲಿ ಮಧುಮೇಹ ನಿಯಂತ್ರಣಕ್ಕೆ ಬಂದಿರುವ ಅಂಶ ಸಂಶೋಧನೆಯೊಂದರಿಂದ ಬೆಳಕಿಗೆ ಬಂದಿದ್ದು, ವ್ಯಾಯಾಮ ಮಾಡುವವರನ್ನು ಪರೀಕ್ಷಿಸಿದಾಗ ಬೊಜ್ಜು ಕರಗಿರುವುದಲ್ಲದೇ ರಕ್ತದಲ್ಲಿನ ಸಕ್ಕರೆ ಅಂಶವೂ ಗಣನೀಯವಾಗಿ ಇಳಿದಿದೆ.

ಈ ಕುರಿತು ಸಂಶೋಧನೆ ಕೈಗೊಂಡಿದ್ದ ಅಮೆರಿಕಾದ ಮೆಡಿಕಲ್ ಸೆಂಟರ್, ಪ್ರತಿ ನಿತ್ಯ ವ್ಯಾಯಾಮ ಮಾಡುವವರು ಹಾಗೂ ಮಾಡದಿರುವವರನ್ನು ಪರೀಕ್ಷೆಗೊಳಪಡಿಸಿದ ವೇಳೆ ಈ ಅಂಶ ಕಂಡು ಬಂದಿದ್ದು, ವ್ಯಾಯಾಮ ಮಾಡುವವರ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗಿದ್ದರೆ ಇದಕ್ಕೆ ವ್ಯತಿರಿಕ್ತವಾಗಿ ವ್ಯಾಯಾಮ ಮಾಡದಿರುವವರಲ್ಲಿ ಸಕ್ಕರೆ ಅಂಶ ಏರಿಕೆಯಾಗಿದೆ.

ಭಾರತದಲ್ಲಿ ಯೋಗ ಕುರಿತು ಪರ- ವಿರೋಧದ ಚರ್ಚೆಗಳು ನಡೆಯುತ್ತಿರುವ ವೇಳೆ ವ್ಯಾಯಾಮ ಹಾಗೂ ಯೋಗದ ಮಹತ್ವದ ಕುರಿತು ಅಮೆರಿಕಾದ ಸಂಶೋಧಕರು ತಿಳಿಸಿಕೊಡುವಂತಾಗಿದೆ. ಪ್ರತಿ ನಿತ್ಯ ವ್ಯಾಯಾಮ ಹಾಗೂ ಯೋಗ ಮಾಡುವುದರಿಂದ ದೇಹಾರೋಗ್ಯಕ್ಕೆ ಅನುಕೂಲವಲ್ಲದೇ ಮಾನಸಿಕ ಆರೋಗ್ಯವೂ ದೃಢವಾಗುತ್ತದೆ.
Courstey: Kannadadunia.com

For North Karnataka News visit www.uksuddi.in

Comments