UK Suddi
The news is by your side.

ಕೊಪ್ಪಳ : ಬೆಳೆಹಾನಿ, ಸಾಲಬಾಧೆ ತಾಳಲಾರದೇ ಗಂಗಾವತಿ ತಾಲೂಕಿನ ಸಿದ್ದಾಪುರ ಗ್ರಾಮದ ರೈತ ಶೇಖರ ಗೌಡ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಶೇಖರ ಗೌಡ 8 ಎಕರೆಯಷ್ಟು ಜಮೀನನ್ನು ಗುತ್ತಿಗೆ ಪಡೆದು ಬತ್ತ ಬೆಳೆಯುತ್ತಿದ್ದ ಶೇಖರ ಗೌಡ ಅಕಾಲಿಕ ಮಳೆಯಿಂದಾಗಿ ಭಾರಿ ಪ್ರಮಾಣದ ಬೆಳೆಹಾನಿಯಿಂದ ತತ್ತರಿಸಿದ್ದ. ಈ ಹಿನ್ನೆಲೆಯಲ್ಲಿ ಸುಮಾರು 5 ಲಕ್ಷ ರೂ.ನಷ್ಟು ಸಾಲ ಮಾಡಿಕೊಂಡಿದ್ದರು. ಬೆಳೆಹಾನಿಯಾದ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದ ಸ್ಥಿತಿಗೆ ತಲುಪಿದ್ದ ಶೇಖರಗೌಡ ತಡರಾತ್ರಿ ಹೊಲದಲ್ಲಿಯೇ ವಿಷ ಸೇವನೆ ಮಾಡಿ ಪ್ರಾಣ ಕಳೆದುಕೊಂಡಿದ್ದಾನೆ. ಪತ್ನಿ ಮತ್ತು ಮಗ ಈಗ ದಿಕ್ಕು ತೋಚದ ಸ್ಥಿತಿ ಬಂದು ನಿಲ್ಲುವಂತಾಗಿದೆ.

For North Karnataka News visit www.uksuddi.in

Comments