UK Suddi
The news is by your side.

ಬೆಳಗಾವಿ: ಭುಸ್ವಾದಿನ ಮಸೂದೆ ಕುರಿತು ರೈತ್ ಸಂವಾದ ಕಾರ್ಯಕ್ರಮ

ಬೆಳಗಾವಿ: ದೇಶದ ಅಭಿವ್ರದ್ದಿಗಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭೂಸ್ವದೀನ ಕಾಯ್ದೆಗೆ ತಿದ್ದುಪಡಿ ತಂದು ಜಾರಿ ಗೊಳಿಸುತ್ತದೆ ಎಂದು ಸಂಸದ ಅಂಗಡಿ ಹೇಳಿದರು.
ಸೋಮವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬಿಜೆಪಿ ರೈತ್ ಮೋರ್ಚಾ ಘಟಕದಿಂದ ಏರ್ಪಡಿಸಿದ್ದ 2014ರ ಭೂಸ್ವದೀನ ಮಸೂದೆ ಕುರಿತು ರೈತರೊಂದಿಗೆ ಸಂವಾದ ಕಾರ್ಯಕ್ರಮ್ ಉದ್ಘಾಟಿಸಿ ಅವರು ಮಾತನಾಡಿದರು.ಮೋದಿ ಸರ್ಕಾರ್ ರೈತರ ಪರವಾಗಿದೆ ಹೊರತು ರೈತ್ ವಿರೋದಿಯಲ್ಲ.ಕೇಂದ್ರ ಸರ್ಕಾರ್ ಜಾರಿಗೊಳಿಸುತ್ತಿರುವ 2014 ಭೂಸ್ವದಿನ ಮಸೂದೆ ಬಗ್ಗೆ ಕಾಂಗ್ರೆಸ್ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ.ದೇಶದ ಪ್ರಗತಿ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದ್ದು,ಕಾಂಗ್ರೆಸ್ ಕುತಂತ್ರಕ್ಕೆ ರೈತರು ಬಲಿ ಆಗಬಾರದು.ದೇಶದ ಅಭಿವ್ರದ್ದಿಯಲ್ಲಿ ರೈತರು ಕೇಂದ್ರ ಸರ್ಕಾರದೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಸದ್ ಸುರೇಶ ಅಂಗಡಿ,ಬಿಜೆಪಿ ಜಿಲ್ಲಾದ್ಯಕ್ಷ ಈರಣ್ಣ ಕಡಾಡಿ, ಬಿಜೆಪಿ ಯುವ ರೈತ್ ಮೋರ್ಚಾ ರಾಜ್ಯಾದ್ಯಕ್ಷ ನಿಂಗಪ್ಪ ಚೌಡನ್ನವರ ಮೊದಲಾದವರು ಉಪಸ್ತಿತರಿದ್ದರು.
For North Karnataka News visit www.uksuddi.in

Comments