ಅರಿಷಿನದ ಉಪಯೋಗಗಳೇನು ಗೊತ್ತಾ….??
* ಅರಿಶಿಣದಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಆಂಟಿ ಸೆಪ್ಟಿಕ್ ಗುಣಗಳಿವೆ. ಇದು ಗಾಯವನ್ನು ಮಾಗಿಸಿ, ತ್ವಚೆಯನ್ನು ಯಥಾಸ್ಥಿತಿಗೆ ತರಲು ಸಹಕರಿಸುತ್ತದೆ.
*ಅರಿಶಿಣ ಸೇವನೆಯಿಂದ ಏರುವ ತೂಕವನ್ನು ಹತೋಟಿಯಲ್ಲಿಡಬಹುದು.
*ಮೆದೋಜೀರಕ ಗ್ರಂಥಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಪುರುಷರ ಜನನಾಂಗದ ಕ್ಯಾನ್ಸರ್ ಪರಿಹರಿಸುವಲ್ಲಿ ಅರಿಶಿಣ ಪ್ರಧಾನ ಪಾತ್ರ ವಹಿಸುತ್ತದೆ. ರಕ್ತನಾಳಗಳಲ್ಲಿ ಗಡ್ಡೆ ಬೆಳೆಯದಂತೆ ಕಾಪಾಡುತ್ತದೆ.
*ಮಕ್ಕಳಲ್ಲಿ ಲ್ಯೂಕೆಮಿಯಾ ಬರದಂತೆ ತಡೆಯಲು ಅರಿಶಿಣ ಪರಿಣಾಮಕಾರಿ.
*ಕರುಳಿನಲ್ಲಿರುವ ಹೆಪಾಟಿಕ್ ಕೋಶಗಳನ್ನು ಪುನಃಶ್ಚೇತನಗೊಳಿಸಿ, ಅವುಗಳಲ್ಲಿ ನಂಜಿನ ವಿರುದ್ಧ ಹೋರಾಡುವಂತಹ ಸಾಮರ್ಥ್ಯವನ್ನು ಇಮ್ಮಡಿಗೊಳಿಸುತ್ತದೆ.
*ಸಹಜ ನೋವು ನಿವಾರಕ ಮತ್ತು ಉರಿಯೂತ ನಿರೋಧಕ ಗುಣ ಹೊಂದಿದೆ. ಸಂಧಿವಾತ, ವಾತರೋಗ, ಕರುಳು ಸಂಬಂಧಿತ ಕಾಯಿಲೆ ನಿವಾರಿಸಲು ಅರಿಶಿಣ ಬಳಸಲಾಗುತ್ತದೆ.
*ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಮಸಾಲೆ ಪದಾರ್ಥಗಳ ಜತೆ ಅರಿಶಿಣವನ್ನು ಬಳಸಲಾಗುತ್ತದೆ.
* ತ್ವಚೆ ಸುಂದರವಾಗಿದ್ದರೆ ಮಾತ್ರ ಸಾಲಲ್ಲ. ಆರೋಗ್ಯವಾಗಿ ಕೂಡ ಇರಬೇಕು. ಇವೆರಡನ್ನೂ ನೀಡತ್ತೆ ಅರಿಷಿನ.
* ಇದು ಕ್ಯಾನ್ಸರ್, ಕೀಲು ನೋವು, ಊತ, ಚರ್ಮ ಸಂಬಂಧಿ ಖಾಯಿಲೆಗಳು, ವೈರಸ್, ಬ್ಯಾಕ್ಟೇರಿಯಾನಂತಹ ಸೂಕ್ಷ್ಮಜೀವಿಗಳನ್ನು ತಹಬಂಧಿಗೆ ತರುವಲ್ಲಿ ಅರಿಷಿನ ಸಹಾಯಕಾರಿ ಆಗಿದೆ. ಭಾರತದಲ್ಲಿ ಸುಮಾರು ಐದು ಸಾವಿರ ವರ್ಷಗಳ ಹಿಂದೆಯೇ ಆಯುರ್ವೇದ ವೈದ್ಯದಲ್ಲಿ ಅರಿಷಿನವನ್ನು ಔಷಧಿಯಾಗಿ ಬಳಸಲಾಗಿದೆ.
* ಕಫಕ್ಕೆ:
ಬಿಸಿ ಹಾಲಿಗೆ ಒಂದು ಚಮಚ ಅರಿಷಿನ ಮಿಶ್ರಣ ಮಾಡಿ ಸೇವಿಸಿ.
* ಜೀರ್ಣಶಕ್ತಿಗೆ:
ಮೊಸರು ಅಥವಾ ಜೇನಿನೊಂದಿಗೆ ಸೇವಿಸಿ.
* ಕೆಮ್ಮು ನೆಗಡಿ:
ಕುದಿಯುವ ನೀರಿಗೆ ಅರಿಷಿನ ಪುಡಿ ಹಾಕಿ ಹಬೆ ತೆಗೆದುಕೊಳ್ಳುವುದು.
* ನೋವು, ಉರಿ:
ಅರಿಷಿನ, ಉಪ್ಪು, ಸುಣ್ಣ ಬೆರೆಸಿ ಆವಿ ತೆಗೆದುಕೊಳ್ಳಿ.
* ಮೊಡವೆ, ಚರ್ಮ ಸಂಬಂದಿ ಕಾಯಿಲೆ:
ಸೀಬೆ ಎಲೆ ಜೊತೆ ನುಣ್ಣಗೆ ಅರಿದು ಲೇಪಿಸಿ.
* ತಲೆಹೊಟ್ಟು ನಿವಾರಣೆಗೆ:
ಸೀಗೆಕಾಯಿಯೊಂದಿಗೆ ಅರಿಷಿನ ಬಳಸಿ.
* ಇನ್ನು ಸ್ಥೂಲಕಾಯದವರು ಹೆಚ್ಚಾಗಿ ಆಹಾರದಲ್ಲಿ ಅರಿಷಿನ ಬಳಸುವುದರಿಂದ ಮೈತೂಕ ಇಳಿಸಿಕೊಳ್ಳಬಹುದು.ಆಲ್ಜಿಮರ್ ಸಮಸ್ಯೆ ನಿವಾರಕವಿದು.ಹದಯ ಸಂಬಂಧಿ ಖಾಯಿಲೆ,ಪ್ರೊಸ್ಟೆಟ್ ಕ್ಯಾನ್ಸರ್ ನಿವಾರಕ.ಅಸ್ತಮಾ,ಜ್ವರ ಬರದಂತೆ ಕಾಪಾಡುತ್ತದೆ.
* ಪ್ರತಿನಿತ್ಯ ಕೆನೆಗೆ ಅರಿಷಿನ ಪುಡಿ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುವುದು.
* ಮಕ್ಕಳಲ್ಲಿ ಅನಗತ್ಯ ರೋಮಗಳು ಇದ್ದಲ್ಲಿ ಕಲ್ಲು ಉಪ್ಪು ಪುಡಿ ಮಾಡಿ ಅದಕ್ಕೆ ಅರಿಷಿನ ಸೇರಿಸಿ ಸ್ನಾನಕ್ಕೂ ಮುನ್ನ ಮೆಲ್ಲನೆ ಮಸಾಜ್ ಮಾಡಿ.
* ಸೂರ್ಯನ ಅತಿ ನೇರಳೆ ಕಿರಣಗಳಿಂದ ಚರ್ಮ ಕಾಪಾಡಿಕೊಳ್ಳಲು ಮಲಗುವ ಮುನ್ನ ಅರಿಷಿನಕ್ಕೆ ಬೆಣ್ಣೆ ಸೇರಿಸಿ ಹಚ್ಚಿಕೊಳ್ಳಿ.
* ಮುಖದಲ್ಲಿ ಕಲೆಗಳು ಇದ್ದಲ್ಲಿ ಹೆಸರು ಹಿಟ್ಟಿನೊಂದಿಗೆ ಅರಿಷಿನ ಸೇರಿಸಿ ಪ್ಯಾಕ್ ಹಾಕಿಕೊಳ್ಳಿ.
* ಮೊಡವೆ ಕಾಟವಿದ್ದರೆ ಪುದೀನಾರಸ ಮತ್ತು ನಿಂಬೆರಸದೊಂದಿಗೆ ಬೆರೆಸಿ ಅರಿಷಿನ ಕಲೆಸಿ ಪ್ಯಾಕ್ ಹಾಕಿಕೊಳ್ಳಿ