UK Suddi
The news is by your side.

ಹಾವೇರಿಯಲ್ಲಿ ಭಾರತೀಯ ಸೈನ್ಯಕ್ಕೆ ಜವಾನರ ನೇಮಕಾತಿ ಪ್ರಕ್ರಿಯೆ

ಇದೇ ಬರುವ ಒಕ್ಟೋಬರ್ 6 ರಿಂದ ಹಾವೇರಿಯಲ್ಲಿ ಭಾರತೀಯ ಸೈನ್ಯಕ್ಕೆ ಜವಾನರ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಉತ್ತರ ಕನ್ನಡ, ಶಿವಮೊಗ್ಗ ,ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ,ವಿಜಯಪುರ, ಧಾರವಾಡ,ಹಾವೇರಿ ಗದಗ್ ಮತ್ತು ಬಾಗಲಕೋಟೆ ಜಿಲ್ಲೆಯ ಆಸಕ್ತ ತರುಣರು ಭಾಗವಹಿಸಬಹುದು. 10ನೇ ತರಗತಿ ಉತ್ತೀರ್ಣರಾದ ಎಲ್ಲರೂ ಭಾಗವಹಿಸಬಹುದಾಗಿದ್ದು joinindianarmy.nic.in ವೆಬ್ಸೈಟ್ ನಲ್ಲಿ ಇದರ ಬಗ್ಗೆ ಮಾಹಿತಿ ಪಡೆಯಬಹುದು, ಅನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ, ಸ್ವೀಕೃತಿಯ ಪ್ರತಿಯೊಂದಿಗೆ ಸಂದರ್ಶನಕ್ಕೆ ತೆರಳಬೇಕು.ಅನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 6 ಕೊನೆಯ ದಿನವಾಗಿದ್ದು, ಅರ್ಜಿ ಭರ್ತಿಮಾಡುವಾಗ ಸೂಚನೆಗಳನ್ನು ಸರಿಯಾಗಿ ಓದಿ ನಂತರ ಸರಿಯಾದ ಮಾಹಿತಿ ನೀಡಬೇಕು .ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಪೂರಕ ಸೌಲಭ್ಯಗಳ ಕೊರತೆ ಇದ್ದಲ್ಲಿ ಅಥವಾ ಅನ್ ಲೈನ್ ನಲ್ಲಿ ಅರ್ಜಿಯನ್ನು ತುಂಬಲು ಪೂರಕ ಮಾಹಿತಿಯ ಕೊರತೆ ಎದುರಿಸುವವರಿಗೆ ಬೇಕಾದ ತಾಂತ್ರಿಕ ಸಹಾಯಕ್ಕಾಗಿ “ಯುವಾಬ್ರಿಗೇಡ್” ದಕ್ಷಿಣ ಕನ್ನಡ, ತಾತ್ಕಾಲಿಕ ಸಹಾಯ ಕೇಂದ್ರವನ್ನು ಮಂಗಳೂರಿನಲ್ಲಿ ತೆರೆಯಲು ನಿರ್ಧರಿಸಿದ್ದು ಆಗಸ್ಟ್ 16 ಭಾನುವಾರ ಬೆಳಗ್ಗೆ 9:30 ರಿಂದ ಮಧ್ಯಾಹ್ನ 2 ಗಂಟೆಯ ತನಕ ಕಾರ್ಯ ನಿರ್ವಹಿಸಲಿದೆ. ಅಭ್ಯರ್ಥಿಗಳು ಈ ಕೇಂದ್ರದ ಉಪಯೋಗವನ್ನು ನಿಗದಿತ ಅವಧಿಯೊಳಗೆ ಪಡೆದುಕೊಳ್ಳಬಹುದಾಗಿದ್ದು. ಆಸಕ್ತರು ಈ ಕೆಳಗಿನ ಸಂಖ್ಯೆಯಲ್ಲಿ ಸಂಪರ್ಕಿಸಿ.
ತಿಲಕ್ ಶಿಶಿಲ
+91 90357 79185

ನಿಮಗೆ ಸೈನ್ಯಕ್ಕೆ ಸೇರುವ ಕುರಿತಾಗಿ ಯಾವುದೇ ರೀತಿಯ ಮಾಹಿತಿ, ಸಹಾಯ ಬೇಕಾದಲ್ಲಿ jointheforces.yb@gmail.comಗೆ ಬರೆಯಿರಿ.

For North Karnataka News visit www.uksuddi.in

Comments