ಬರದ ಬರೆ
ಸುಮಾರು ಮೂರು ದಶಕಗಳ ಹಿಂದೆ, 1986ರಲ್ಲಿ ಭೀಕರ ಬರದ ದವಡೆಗೆ ಸಿಲುಕಿದ್ದ ರಾಜ್ಯ ಇದೀಗ ಮತ್ತೆ ಆ ರೀತಿಯ ಬರಗಾಲದ ಬವಣೆಗೆ ತುತ್ತಾಗಿದೆ. ಗುರುವಾರ 9 ತಾಲೂಕುಗಳನ್ನು ರಾಜ್ಯ ಸರ್ಕಾರ ಬರದ ಪಟ್ಟಿಗೆ ಸೇರ್ಪಡೆಗೊಳಿಸಿದ್ದು, ಬರ ತಾಲೂಕುಗಳ ಸಂಖ್ಯೆ 135ಕ್ಕೆ ಏರಿದಂತಾಗಿದೆ. ಆದರೆ ಬರದ ತೀವ್ರತೆ ದಿನೇದಿನೆ ಹೆಚ್ಚುತ್ತಿರುವುದರಿಂದ ಉಳಿದ 41 ತಾಲೂಕುಗಳ ಪೈಕಿ ಇನ್ನೂ ಹಲವು ಬರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಆತಂಕ ಎದುರಾಗಿದೆ.
ಅರಕಲಗೂಡು, ಹುಣಸೂರು, ತಿಪಟೂರು, ಚನ್ನಗಿರಿ, ತರೀಕೆರೆ, ದೊಡ್ಡಬಳ್ಳಾಪುರ, ಹೊಸಕೋಟೆ, ಪಿರಿಯಾಪಟ್ಟಣ ಮತ್ತು ಹಿರೇಕೆರೂರು ಹೊಸದಾಗಿ ಬರದ ಪಟ್ಟಿಗೆ ಸೇರಿರುವ ತಾಲೂಕುಗಳು. ಈ ಮೊದಲು 124 ತಾಲೂಕುಗಳನ್ನು ಬರಪೀಡಿತವೆಂದು ಘೊಷಿಸಲಾಗಿತ್ತು.
For North Karnataka News visit www.uksuddi.in