ಧಾರವಾಡಕ್ಕೆ ಐಐಟಿ
ಧಾರವಾಡಕ್ಕೆ ಐಐಟಿ
ಇಡೀ ದೇಶದ ಗಮನ ಸೆಳೆದಿದ್ದ ಪ್ರತಿಷ್ಠಿತ ಐಐಟಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಕೊನೆಗೂ ವಿದ್ಯಾಕಾಶಿ ಧಾರವಾಡಕ್ಕೆ ಒಲಿದಿದೆ. ಕಳೆದ ಕೇಂದ್ರ ಮುಂಗಡ ಪತ್ರದಲ್ಲಿ ರಾಜ್ಯಕ್ಕೆ ನೀಡಲಾಗಿದ್ದ ಐಐಟಿ ಸಂಸ್ಥೆಯನ್ನು ಒಲಿಸಿಕೊಳ್ಳಲು ರಾಯಚೂರು, ಮೈಸೂರು ಮತ್ತು ಧಾರವಾಡ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಈ ಸಂಬಂಧ ಎಲ್ಲ ಊಹಾಪೋಹಗಳಿಗೆ ತೆರೆಬಿದ್ದಿದ್ದು ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ಕೇಂದ್ರ ಸರ್ಕಾರ ಅಂತಿಮವಾಗಿ ಒಪ್ಪಿಗೆ ಮುದ್ರೆ ಒತ್ತಿದೆ. ಕೇಂದ್ರ ಮಾನವ ಸಂಪ ನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಈ ಕುರಿತ ಕಡತಕ್ಕೆ ಮಂಗಳವಾರ ಸಂಜೆ ಅಂಕಿತ ಹಾಕಿರುವುದು ಖಚಿತವಾಗಿದೆ
Vijayavani
For North Karnataka News visit www.uksuddi.in