UK Suddi
The news is by your side.

ಕಲಬುರಗಿ ಬಳಿ ಹಳಿ ತಪ್ಪಿದ ತುರಂತ್ ಎಕ್ಸ್​ಪ್ರೆಸ್, 2 ಸಾವು

ಚಿತ್ತಾಪುರ ತಾಲೂಕಿನ ಮರತೂರು ರೈಲ್ವೆ ನಿಲ್ದಾಣದಲ್ಲಿ ಶನಿವಾರ ನಸುಕಿನಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಸಿಕಂದರಾಬಾದ್​ನಿಂದ ಮುಂಬೈಗೆ ಹೊರಟಿದ್ದ ತುರಂತ್ ಎಕ್ಸ್​ಪ್ರೆಸ್​ನ(ರೈಲ್ವೆ ನಂ. 12220) ಹವಾನಿಯಂತ್ರಿತ 9 ಬೋಗಿಗಳು ಉರು ಳಿದ್ದೇ ದುರಂತಕ್ಕೆ ಕಾರಣ. ಅಪಘಾತಕ್ಕೊಳಗಾದ ರೈಲು ವಾರಕ್ಕೊಮ್ಮೆ ಸಂಚರಿಸá-ತ್ತದೆ.

ಹೈದರಾಬಾದ್​ನ ರಾಜದೀಪ್ ಎನರ್ಜಿ ಕಂಪನಿಯ ನೌಕರರಾದ ಜ್ಯೋತಿ(46), ಪುಷ್ಪಲತಾ(28) ಮೃತರು. ಲಕ್ಷ್ಮೀ(58), ಭಾಸ್ಕರರಾವ್(45), ಅಬ್ದುಲ್ ಅರ್ಷದ್(25), ರಾಜೀವ್ ರಂಜನ್ ರಾಯ್(30), ಮಲಕರೆಡ್ಡಿ(60), ಯಲ್ಲಮ್ಮ, ರಾಮಕೃಷ್ಣಾರೆಡ್ಡಿ ಗಾಯಗೊಂಡಿದ್ದು, ಅವರನ್ನು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.

ಶನಿವಾರ ನಸುಕಿನ 2.12 ಗಂಟೆಗೆ ತುರಂತ್ ಎಕ್ಸ್​ಪ್ರೆಸ್ ಮರತೂರು ಬಳಿ ತಿರುವಿನಲ್ಲಿ ಬರá-ವ ವೇಳೆಗೆ 9 ಬೋಗಿಗಳು ಹಳಿ ತಪ್ಪಿದ್ದು, ಹಳಿಗಳ ಫಿಶ್​ಪ್ಲೇಟ್, ವೆಲ್ಡಿಂಗ್ ಜಾಯಿಂಟ್​ಗಳು ಕತ್ತರಿಸಿವೆ. ಸಿಮೆಂಟ್ ಸ್ಲೀಪರ್​ಗಳು ಕಿತ್ತು ಹೋಗಿವೆ. ವಿದ್ಯುತ್ ಕಂಬಗಳು ಉರುಳಿವೆ. 3 ಬೋಗಿಗಳು ಹಳಿಯಿಂದ 30 ಅಡಿಗಿಂತಲೂ ಹೆಚ್ಚು ದೂರದಲ್ಲಿ ಬಿದ್ದಿವೆ. ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ರಕ್ಷಣಾ ಕ್ರಮಗಳನ್ನು ಆರಂಭಿಸಿದರು. ಇಲಾಖೆಯ ವೈದ್ಯರು ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಬಳಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.

For North Karnataka News visit www.uksuddi.in

Comments