UK Suddi
The news is by your side.

ಸ್ಲಿಮ್ ಆಗಲು 5 ಸುಲಭ ವಿಧಾನ

ಈಗೀಗಂತೂ ದೇಹ ತೂಕದ ಸಮಸ್ಯೆ ಇರುವವರೇ ಸಮಾಜದಲ್ಲಿ ಬಹುಸಂಖ್ಯಾತರಾಗಿಬಿಟ್ಟಿದ್ದಾರೆ. ತೂಕ ಇಳಿಸಿಕೊಳ್ಳಲು ಪರದಾಡುತ್ತಾರೆ. ದಿಢೀರನೇ ಸಿಕ್ಕಾಪಟ್ಟೆ ವ್ಯಾಯಾಮ ಮಾಡಿ ಬೆವರು ಹರಿಸಿದರೂ ತೂಕ ಕಡಿಮೆಯಾಗುತ್ತಿಲ್ಲವಲ್ಲ ಎಂದು ಆತಂಕಪಡುವವರು ಬಹಳ ಮಂದಿ. ವ್ಯಾಯಾಮ ಮಾಡಿದರೂ, ಆಹಾರ ಪ್ರಮಾಣ ಕಡಿಮೆ ಮಾಡಿದರೂ ಸ್ಲಿಮ್ ಆಗುತ್ತಿಲ್ಲವಲ್ಲ ಎಂದು ಕಳವಳಪಡುವವರೂ ಇದ್ದಾರೆ. ಈ ಹಿನ್ನೆಲೆಯಲ್ಲಿ ಬಹಳ ಸಿಂಪಲ್ಲಾಗಿರುವ ಆದರೆ ಪರಿಣಾಮ ಬೀರಬಲ್ಲ 5 ಟಿಪ್ಸ್ ಇಲ್ಲಿವೆ.

1) ತಿಂಡಿ ಬಿಡಬಾರದು:
ಆಹಾರ ಕಡಿಮೆ ತೆಗೆದುಕೊಳ್ಳುವುದೆಂದರೆ ಉಪವಾಸ ಇರುವುದಲ್ಲ ಎಂದರ್ಥ. ಬೆಳಗಿನ ತಿಂಡಿ ಬಹಳ ಮಹತ್ವದ್ದು. ಯಾವುದೇ ಕಾರಣಕ್ಕೂ ಉಪಾಹಾರ ಮಿಸ್ ಮಾಡಬೇಡಿ. ದೇಹ ತೂಕ ಹೆಚ್ಚಾಗಬಾರದೆಂದು ಬಯಸುವವರಂತೂ ತಿಂಡಿ ಮಾಡಲೇಬೇಕು.

2) ಅಧಿಕ ನಾರಿನಂಶವಿರುವ ಆಹಾರ:
ಮಧ್ಯಾಹ್ನದ ಊಟದಲ್ಲಿ ಹೆಚ್ಚು ಫೈಬರ್’ಯುಕ್ತ ಆಹಾರ ಸೇವಿಸುವುದು ಒಳ್ಳೆಯದು. ನಾರಿನಂಶವಿರುವ ಆಹಾರದಲ್ಲಿ ಕಡಿಮೆ ಕೊಬ್ಬು, ಕಡಿಮೆ ಕ್ಯಾಲೋರಿಗಳಿರುತ್ತವೆ. ಜೊತೆಗೆ, ಇವು ನಿಧಾನವಾಗಿ ಜೀರ್ಣವಾಗುವುದರಿಂದ ತುಂಬಾ ಹೊತ್ತು ಹೊಟ್ಟೆ ತುಂಬಿದಂತೆ ಇರುತ್ತದೆ. ಮಧ್ಯಾಹ್ನದ ಭೋಜನದಲ್ಲಿ ಬ್ರೌನ್ ರೈಸ್ ಜೊತೆ ತರಕಾರಿ ಸೇವಿಸಬಹುದು.

3) ಸಲಾಡ್, ಹಸಿ ತರಕಾರಿ, ಹಸಿರೆಲೆಯುಕ್ತ ತರಕಾರಿ:
ಕ್ಯಾರಟ್, ಹೂಕೋಸು ಮೊದಲಾದ ಹಸಿರು ಎಲೆಗಳಿರುವ ತರಕಾರಿಗಳನ್ನ ಕತ್ತರಿಸಿ ಸಲಾಡ್ ಮಾಡಿಕೊಂಡು ತಿನ್ನಬಹುದು. ಇಂಥ ತರಕಾರಿಗಳಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ, ವಿಟಮಿನ್ ಸಿ ಮತ್ತು ಇ ಹೆಚ್ಚಿರುತ್ತದೆ. ಈ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ಬಹಳ ಉಪಯುಕ್ತ.

4) ಮೀನು, ಕೋಳಿ ತಿನ್ನಿರಿ:
ದೇಹಕ್ಕೆ ಸ್ವಲ್ಪಮಟ್ಟದಲ್ಲಿ ಪ್ರೋಟೀನ್ ಅಂಶ ಅಗತ್ಯವಿದೆ. ಯಾಕೆಂದರೆ, ಕಡಿಮೆ ಪ್ರೋಟೀನ್, ಅಧಿಕ ಕಾರ್ಬೊಹೈಡ್ರೇಟ್ ಅಂಶಗಳನ್ನ ಹೊಂದಿರುವ ವ್ಯಕ್ತಿಗಳು ಸ್ಲಿಮ್ ಆಗುವ ಸಾಧ್ಯತೆ ಕಡಿಮೆ ಇರುತ್ತದೆ. ಹೀಗಾಗಿ, ಪ್ರೋಟೀನ್’ಯುಕ್ತ ಆಹಾರಗಳಾದ ಮೀನು, ಚಿಕನ್’ಗಳನ್ನ ವಾರಕ್ಕೊಮ್ಮೆಯಾದರೂ ಸೇವಿಸುವುದೊಳಿತು. ಎಲೆಕೋಸು, ಸೊಪ್ಪಿನಲ್ಲೂ ಸಾಕಷ್ಟು ಪ್ರೋಟೀನ್ ಅಂಶಗಳಿರುತ್ತವೆ.

5) ಕಾಳು ತುಂಬಾ ಮುಖ್ಯ:
ಕಾಳುಗಳಲ್ಲಿ ಕ್ಯಾಲ್ಷಿಯಮ್ ಅಂಶ ಸಾಕಷ್ಟು ಇರುತ್ತದೆ. ನಿಯಮಿತವಾಗಿ ಕಾಳುಗಳನ್ನು ತಿನ್ನುವುದು ಒಳ್ಳೆಯದು. ಹಾಲು, ಮೊಸರಿನಂಥ ಆಹಾರಗಳಲ್ಲೂ ಕ್ಯಾಲ್ಷಿಯಮ್ ಅಂಶವಿರುತ್ತದೆ.

For North Karnataka News visit www.uksuddi.in

Comments