UK Suddi
The news is by your side.

ಮರಕ್ಕೆ ಕ್ಯಾಬ್ ಡಿಕ್ಕಿ, ಸ್ಥಳದಲ್ಲೇ 4 ಸಾವು

ವಿಜಯಪುರ ತಾಲೂಕಿನ ತಿಕೋಟ ಬಳಿ ಖಾಸಗಿ ಕ್ಯಾಬ್​ವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 4 ಜನರು ಸಾವಿಗೀಡಾಗಿದ್ದು, 6 ಜನರಿಗೆ ಗಂಭೀರ ಗಾಯಗಳಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಕ್ಯಾಬ್​ದಲ್ಲಿ 25ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಕ್ಯಾಬ್ ವಿಜಯಪುರದಿಂದ ಕಲ್ಮಡಿಕ್ಕೆ ತೆರಳುತ್ತಿತ್ತು. ಬೈಕ್ ಸವಾರಿನಿಗೆ ಕ್ಯಾಬ್ ಡಿಕ್ಕಿಯಾಗುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಕ್ಯಾಬ್ ಮರಕ್ಕೆ ಡಿಕ್ಕಿ ಹೊಡೆದಿದೆ. ಮೃತರನ್ನು ಅನಿತಾ ಕಾಮೇಶ್ ರಾಥೋಡ್ (30), ಜಯಶ್ರೀ ನಿಂಗನಗೌಡ ಬಗಲಿ (30), ಸರೋಜಿನಿ ದಾಮೋದರ ಚವ್ಹಾಣ 54) ಮತ್ತು ಬೈಕ್ ಸವಾರ ಸಿದ್ದರಾಮ ವಿಠಲ ಮಾಮನಿ (55) ಎಂದು ಗುರುತಿಸಲಾಗಿದೆ.

For North Karnataka News visit www.uksuddi.in

Comments