ಸಂಸದ ಪ್ರತಾಪ್ಸಿಂಹ 13 ಸಾವಿರ ಅಡಿ ಎತ್ತರದಿಂದ ‘ಸ್ಕೈ ಡೈವಿಂಗ್’
ಪ್ರವಾಸೋದ್ಯಮ ಬೆಳವಣಿಗೆ ಆಶಯದೊಂದಿಗೆ ಸಂಸದ ಪ್ರತಾಪ್ಸಿಂಹ 13 ಸಾವಿರ ಅಡಿ ಎತ್ತರದಿಂದ ‘ಸ್ಕೈ ಡೈವಿಂಗ್’ ಮಾಡಿದ್ದಾರೆ. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಸೆಸ್ನಾ ವಿಮಾನದಲ್ಲಿ ಆಗಸಕ್ಕೆ ಹಾರಿದ ಸಂಸದರು 13 ಸಾವಿರ ಅಡಿ ಎತ್ತರದಿಂದ ಗಂಟೆಗೆ 220 ಕಿ.ಮೀ. ವೇಗದಲ್ಲಿ ಭೂವಿಗೆ ಜಿಗಿದು ರೋಚಕವಾಗಿ ತೇಲಾಡಿದ್ದಾರೆ. ಆ ಮೂಲಕ ಸ್ಕೈ ಡೈವಿಂಗ್ ಮಾಡಿದ 16ನೇ ಲೋಕಸಭೆಯ ಮೊದಲ ಮತ್ತು ಏಕೈಕ ಸಂಸದ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
For North Karnataka News visit www.uksuddi.in