UK Suddi
The news is by your side.

ಬಸವನ ಬಾಗೇವಾಡಿ

ಬಸವನ ಬಾಗೇವಾಡಿ ಬಿಜಾಪುರ ಜಿಲ್ಲೆಯ ಒಂದು ತಾಲೂಕು ಕೇಂದ್ರ.
ಬಸವನ ಬಾಗೇವಾಡಿ ಗ್ರಾಮವು ಬಿಜಾಪುರ ಜಿಲ್ಲೆಯ ಪ್ರಸಿದ್ಧ ಹಾಗೂ ಪ್ರಾಚೀನ ಸ್ಥಳ. ಬಿಜಾಪುರ ಜಿಲ್ಲಾ ಕೇಂದ್ರದಿಂದ 43 ಕಿಲೋ ಮೀಟರ್ ದೂರದಲ್ಲಿರುವ ಈ ನಾಡು ಪವಿತ್ರ ಪುಣ್ಯಕ್ಷೇತ್ರವಾಗಲು ಕಾರಣವೇ ಭಕ್ತಿ ಭಂಡಾರಿ ಬಸವಣ್ಣನವರು. ಬಸವೇಶ್ವರು ಹುಟ್ಟಿದ ಈ ಪುಣ್ಯಭೂಮಿ ಇತಿಹಾಸಪ್ರಸಿದ್ಧ ನಾಡಾಗಿ ವಿಶ್ವದ ಗಮನ ಸೆಳೆದಿದೆ.

ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿರುವ ಈ ಪುಣ್ಯಭೂಮಿ ನೋಡಲೇಬೇಕಾದ ಸ್ಥಳ. ಪ್ರತಿ ನಿತ್ಯ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬಸವಣ್ಣನವರು ಹುಟ್ಟಿದ ಪುಣ್ಯಭೂಮಿಯ ದರ್ಶನದಿಂದ ಪುನೀತರಾಗುತ್ತಾರೆ.

ಐತಿಹ್ಯ: 800 ವರ್ಷಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದ (ವಾದಿರಾಜ) ಮಾದರಸ ಹಾಗೂ ಮಾದಲಾಂಬಿಕೆ ಎಂಬ ದಂಪತಿ ನಂದೀಶ್ವರನ ಭಕ್ತರಾಗಿದ್ದರು. ಅವರು ಕೈಗೊಂಡ ನಂದಿವ್ರತದ ಫಲವಾಗಿ ದೈವಕೃಪೆಯಿಂದ ಶಿವನೇ ತನ್ನ ವಾಹನ ನಂದಿಯನ್ನು ಇವರ ಪುತ್ರರಾಗಿ ಹುಟ್ಟುವಂತೆ ಅನುಗ್ರಹಿಸಿದನಂತೆ. ಹೀಗೆ ದೈವಾನುಗ್ರದಿಂದ ಜನಿಸಿದ ಆ ಕಂದನೇ 12ನೆಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ ಜಗಜ್ಯೋತಿ ಬಸವೇಶ್ವರರು.

ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಬಸವಣ್ಣನವರು, ತಮ್ಮ ಉಪನಯನದ ಬಳಿಕ, ಮೇಲು -ಕೀಳೆಂಬ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಭಟಿಸಲು ಯಜ್ಞೋಪವೀತವನ್ನು ಕಿತ್ತು ಹಾಕಿ, ಸಂಗಮಕ್ಕೆ ಹೋದರೆಂದು ಹೇಳಲಾಗಿದೆ.

ಆಗ ಕಳಚೂರ್ಯ ಬಿಜ್ಜಳನ ಬಳಿ ದಂಡಾಧಿಶನಾಗಿದ್ದ ಇವರ ಸೋದರಮಾವ ಬಲದೇವ ತನ್ನ ಒಬ್ಬಳೇ ಮಗಳು ಗಂಗಾಂಬಿಕೆಯನ್ನು ಕೊಟ್ಟು ಮದುವೆ ಮಾಡಿದರು.ನಂತರ ಬಸವೇಶ್ವರರು ಬಿಜ್ಜಖನ ಇನ್ನೊಬ್ಬ ದಂಡನಾಯಕ ಸಿದ್ಧರಸನ ಮಗಳು ನೀಲಾಂಬಿಕೆಯನ್ನು ವರಿಸಿದರು.

ಬಿಜ್ಜಳನ ಭಂಡಾರದ ಮಂತ್ರಿಯಾಗಿ, ಹಲವು ಕ್ರಾಂತಿಕಾರಿ ಕ್ರಮಕೈಗೊಂಡ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಕಲ್ಪನೆ ಜೀವನಾದರ್ಶವಾಗಿದೆ.

ವಚನಕಾರರಾಗಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಬಸವಣ್ಣನವರ ಜನ್ಮಭೂಮಿ ಇಂದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಬಸವನಬಾಗೇವಾಡಿ ಎಂದೇ ಖ್ಯಾತವಾಗಿದೆ.

ಸುಮಾರು 800 ವರ್ಷಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದ (ವಾದಿರಾಜ) ಮಾದರಸ ಹಾಗೂ ಮಾದಲಾಂಬಿಕೆ ಎಂಬ ದಂಪತಿ ನಂದೀಶ್ವರನ ಭಕ್ತರಾಗಿದ್ದರು. ಅವರು ಕೈಗೊಂಡ ನಂದಿವ್ರತದ ಫಲವಾಗಿ ದೈವಾನುಗ್ರದಿಂದ ಜನಿಸಿದ ಆ ಕಂದನೇ 12ನೆಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ ಜಗಜ್ಯೋತಿ ಬಸವೇಶ್ವರರು.

ಬಸವನ ಬಾಗೇವಾಡಿಯು ಬಿಜಾಪುರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಬಸವನ ಬಾಗೇವಾಡಿಯು ಬಿಜಾಪುರ ಜಿಲ್ಲೆಯ ಪ್ರಸಿದ್ಧ ಹಾಗೂ ಪ್ರಾಚೀನ ಸ್ಥಳ. ಬಿಜಾಪುರ ಜಿಲ್ಲಾ ಕೇಂದ್ರದಿಂದ 43 ಕಿಲೋ ಮೀಟರ್ ದೂರದಲ್ಲಿರುವ ಈ ನಾಡು ಪವಿತ್ರ ಪುಣ್ಯಕ್ಷೇತ್ರವಾಗಲು ಕಾರಣವೇ ಭಕ್ತಿ ಭಂಡಾರಿ ಬಸವಣ್ಣನವರು. ಬಸವೇಶ್ವರರು ಹುಟ್ಟಿದ ಈ ಪುಣ್ಯಭೂಮಿ ಇತಿಹಾಸಪ್ರಸಿದ್ಧ ನಾಡಾಗಿ ವಿಶ್ವದ ಗಮನ ಸೆಳೆದಿದೆ.

ವಚನಕಾರರಾಗಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಬಸವಣ್ಣನವರ ಜನ್ಮಭೂಮಿ ಇಂದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಬಾಗೇವಾಡಿಯಿಂದ ಬಸವನಬಾಗೇವಾಡಿ ಎಂದೇ ಖ್ಯಾತವಾಗಿದೆ. ಇಲ್ಲಿ ಪುರಾತನ ಕಾಲದ ಬಸವೇಶ್ವರ ದೇವಸ್ಥಾನ ನೋಡುಗರ ಮನ ಸೆಳೆಯುತ್ತದೆ.

ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿರುವ ಈ ಪುಣ್ಯಭೂಮಿ ಲಿಂಗಾಯತರು ನೋಡಲೇಬೇಕಾದ ಸ್ಥಳ. ಪ್ರತಿ ನಿತ್ಯ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬಸವಣ್ಣನವರು ಹುಟ್ಟಿದ ಪುಣ್ಯಭೂಮಿಯ ದರ್ಶನದಿಂದ ಪುನೀತರಾಗುತ್ತಾರೆ.

For North Karnataka News visit www.uksuddi.in

Comments