ಹಂಪಿಯಲ್ಲಿ ಹೆಚ್ಚಿದ ಪ್ರವಾಸಿಗರ ಸಂಖ್ಯೆ
ಓಡಾಟವೇ ಹೆಚ್ಚು. ಆದರೆ, ಕಳೆದೊಂದು ವಾರದಿಂದ ಸ್ಮಾರಕ ವೀಕ್ಷಣೆಗೆ ಸ್ಥಳೀಯ ಮತ್ತು
ನೆರೆ ಜಿಲ್ಲೆಯ ಸಾವಿರಾರು ಪ್ರವಾಸಿಗರು ಹಂಪಿ ಕಡೆ ಲಗ್ಗೆ ಇಡುತ್ತಿದ್ದಾರೆ.
ನಾಲ್ಕೈದು ದಿನಗಳ ಸರಣಿ ರಜೆ ಜತೆಗೆ ಶಾಲೆಗೆ ದಸರಾ ಬಿಡುವು ಇರುವುದರಿಂದ
ಪ್ರವಾಸಿಗರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ನೆರೆ ಜಿಲ್ಲೆಗಳಾದ ಕೊಪ್ಪಳ, ಗದಗ,
ರಾಯಚೂರು, ದಾವಣಗೆರೆ, ಚಿತ್ರದುರ್ಗ, ಬೆಳಗಾವಿ, ಬೆಂಗಳೂರು, ಧಾರವಾಡ
ಸೇರಿ ರಾಜ್ಯದ ಬಹುತೇಕ ಜಿಲ್ಲೆಯ ಪ್ರವಾಸಿಗರು ಕಳೆದೊಂದು ವಾರದಿಂದ ಹಂಪಿ ಸ್ಮಾರಕಗಳ ಸೊಬಗು ವೀಕ್ಷಣೆಗೆ ಬರುತ್ತಿದ್ದಾರೆ.
ನೆರೆಯ ಆಂಧ್ರಪ್ರದೇಶದ ಅನಂತಪುರ, ಕರ್ನೂಲ್ ಜಿಲ್ಲೆಗಳಿಂದಲೂ ಸಾವಿರಾರು
ಪ್ರವಾಸಿಗರು ಹಂಪಿಗೆ ಆಗಮಿಸುತ್ತಿದ್ದಾರೆ. ಕಳೆದ ಅ.22 ರಿಂದ 27ರ ವರೆಗೆ ಪ್ರವಾಸಿಗರ
ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಹಂಪಿಯ ವಿಜಯ ವಿಠಲ ದೇವಸ್ಥಾನದ ವರೆಗೆ ವಾಹನ ಸಂಚಾರ ನಿಷೇಧಿಧಿಸಿದ್ದರಿಂದ ಸಾರ್ವಜನಿಕರ ವಾಹನದಲ್ಲಿಯೇ ಪ್ರವಾಸಿಗರು
ಹೋಗಬೇಕಿದೆ.
ಈ ಸ್ಮಾರಕಗಳಿಗೆ ಕರೆದೊಯ್ಯುವ ವಾಹನದಲ್ಲಿ ಸಂಚರಿಸಿದ ಪ್ರವಾಸಿಗರಿಂದ ಪ್ರತಿದಿನ ಕನಿಷ್ಠ 50 ಸಾವಿರ ರೂ. ಪ್ರಯಾಣ ದರ ಸಂಗ್ರಹವಾಗಿದೆ. ಇನ್ನು ವಿರೂಪಾಕ್ಷೇಶ್ವರ ದೇವಸ್ಥಾನ, ಎದುರು ಬಸವಣ್ಣ, ರಥ ಬೀದಿ, ಹೇಮಕೂಟ, ಸಾಸುವೆ ಕಾಳು ಹಾಗೂ ಕಡಲೆ ಕಾಳು ಗಣಪ, ಕೃಷ್ಣ ದೇವಸ್ಥಾನ, ಬಡವಿಲಿಂಗ, ಉಗ್ರ ನರಸಿಂಹ, ಕಮಲ್ ಮಹಲ್,
ರಾಣಿಯರ ಸ್ನಾನಗೃಹ, ಮಹಾನವಮಿ ದಿಬ್ಬ ಸೇರಿ ವಿವಿಧ ಪ್ರಮುಖ ಸ್ಮಾರಕ ವೀಕ್ಷಣೆಗೆ
ಪ್ರವಾಸಿಗರು ಮುಗಿಬಿದ್ದಿದ್ದು ಕಂಡುಬಂತು. ಪ್ರವಾಸಿರ ಹೆಚ್ಚಳದಿಂದ ವ್ಯಾಪಾರಿಗಳು
ಮತ್ತು ಪ್ರವಾಸಿ ಗೈಡ್ಗಳೂ ಫುಲ್ ಖುಷಿಯಾಗಿದ್ದಾರೆ.