ಬಾಗಲಕೋಟೆ-ಕುಡಚಿ ರೈಲು ಮಾರ್ಗ ಮರುಪರಿಶೀಲನೆ
ರಬಕವಿ ಬನಹಟ್ಟಿ: ಕೇಂದ್ರ ಸರ್ಕಾರ ಅಧೀನದಲ್ಲಿ ನಡೆಯುತ್ತಿರುವ ಬಾಗಲಕೋಟೆ-ಕುಡಚಿ ರೈಲು ಮಾರ್ಗ ಈಗಾಗಲೇ ಗುರುತಿಸಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಮಾರ್ಗದ ಕಾಮಗಾರಿ ಪ್ರಾರಂಭದ ಹಂತದಲ್ಲಿದೆ. ಅದರಂತೆ ಜಮಖಂಡಿ ತಾಲೂಕಿನ ವ್ಯಾಪ್ತಿಯಲ್ಲಿ ಮಾರ್ಗ ಎಲ್ಲೆಲ್ಲಿ ಹರಿದು ಹೋಗುತ್ತದೆ. ಮತ್ತು ಯಾವ ಯಾವ ಗ್ರಾಮಗಳ ರೈತರ ಹೊಲಗದ್ದೆಳ ಬೆಳೆ ಹಾನಿ ಯಾಗುತ್ತದೆ ಎಂಬೆಲ್ಲ ಸಮಗ್ರ ವರದಿಗಳ ಪುನರ್ಪರಿಶೀಲನೆ ಕಾರ್ಯ
ಮಾಡಲಾಗುತ್ತಿದೆ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಕೆ. ರಾಕೇಶಕುಮಾರ ಹೇಳಿದರು. ಜಮಖಂಡಿ ತಾಲೂಕಿನ ನಾವಲಗಿ, ಜಗದಾಳ, ರಬಕವಿ ಬನಹಟ್ಟಿ ಸೇರಿದಂತೆ ಅನೇಕ ಗ್ರಾಮಗಳ ರೈತರ ಹೊಲಗದ್ದೆಗಳಿಗೆ ತಮ್ಮ ಅಧಿಕಾರಿಗಳೊಂದಿಗೆ ತೆರಳಿ ಆದೇಶದಂತೆ ಮರು ಪರಿಶೀಲನೆ (ಅವಾರ್ಡ್ ಇನ್ಕಾಯಿರಿ) ಕಾರ್ಯ ನಡೆಸಿದರು.

ಜಗದಾಳ ಮಾರ್ಗವಾಗಿ ಬನಹಟ್ಟಿ ಕರೆಯ ಹಿಂಭಾಗದಲ್ಲಿರುವ ಗುರುವ ಹಾಗೂ ಹೂಗಾರ
ತೋಟದ ಮೇಲೆ ಮಾರ್ಗ ಹಾಯ್ದು ಹೊಸೂರ ಗ್ರಾಮದ ದಕ್ಷಿಣ ದಿಕ್ಕಿನಿಂದ ಮಾರ್ಗ ಹೋಗುತ್ತದೆ ಎಂದರು. ರೈಲು ಮಾರ್ಗ ಹಾಯ್ದು ಹೋಗುವ ಮಾರ್ಗದಲ್ಲಿ ಬರುವ ರೈತರ
ಹೊಲಗದ್ದೆಗಳಲ್ಲಿ ಈಗ ಯಾವ ಯಾವ ಬೆಳೆಗಳಿವೆ, ತೋಟದ ಮನೆ, ಯಾವ ಯಾವ ಮರಗಳು ಹಾನಿಯಾಗುತ್ತವೆ ಎಂಬೆಲ್ಲ ಸಮಗ್ರ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.
For North Karnataka News visit www.uksuddi.in