UK Suddi
The news is by your side.

ತೇರದಾಳ ಧೇರಪ್ಪ ಕ್ಷೇತ್ರ ಫ‌ಲ

ಬನಹಟ್ಟಿಯ ತೇರದಾಳದ ಧರೆಪ್ಪ ಕಿತ್ತೂರರ ಹೊಟ್ಟೆ ತಣ್ಣಗಿದೆ. ಏಕೆಂದರೆ ಇವರು
ಶುಗರ್‌ಕ್ವೀನ್‌ ತಳಿಯ ಕಲ್ಲಂಗಡಿ ಬೆಳೆದಿದ್ದಾರೆ. ಮುಖ್ಯವಾಗಿ ಬೆಳೆದ ಬೆಳೆಗೆ ಒಳ್ಳೇ
ರೇಟು ಸಿಕ್ಕಿದೆ. ಈಗ ಸುತ್ತಮುತ್ತಲ ರೈತರು ಕಿತ್ತೂರರನ್ನು ನೋಡುತ್ತಿದ್ದಾರೆ. ಅವರ
ಕೃಷಿಯ ಹೆಜ್ಜೆಯ ಮೇಲೆ ಹೆಜ್ಜೆಯ ಇಡುವ ಪ್ರಯತ್ನ ಮಾಡುತ್ತಿದ್ದಾರೆ.

ಇವರದು 3 ಎಕರೆ ಜಮೀನು. ಮೊದಲು ಭೂಮಿಯನ್ನು ಹದ ಮಾಡಿಕೊಂಡು, ಪ್ರತಿ ಎಕರೆಗೆ 10 ಟನ್‌ ತಿಪ್ಪೆ ಗೊಬ್ಬರ, 2 ಟನ್‌ ಎರೆಹುಳ ಗೊಬ್ಬರ, 4 ಕ್ವಿಂಟಲ್‌ ಬೇವಿನ ಹಿಂಡಿ ಹಾಕಿ ಬೆಡ್‌ ನಿರ್ಮಾಣ ಮಾಡಿಕೊಂಡರು. ನಂತರ ಡ್ರಿಫ್‌ ಅಳವಡಿಸಿ, ಮಲಿcಂಗ್‌ ಪೇಪರ್‌ ಹೊದಿಕೆ ಮಾಡಿದರು. 7 ಫೂಟ್‌ಗೆ 1 ಬೆಡ್‌ 7×2 ರಂತೆ ಜಿಗ್‌ ಜಾಗ್‌ ಪದ್ದತಿಯಲ್ಲಿ ಎಕರೆಗೆ 6,000 ಸಸಿಗಳನ್ನು ನಾಟಿ ಮಾಡಿದ್ದಾರೆ. ಅಗತ್ಯವಿದ್ದಾಗ ಜೀವಸಾರ ಘಟಕದಿಂದ(ಬಯೋಡೆ„ಜೆಸ್ಟ್‌ರ) ಹನಿ ನೀರಾವರಿ ಮೂಲಕ ಸಾವಯವ ಗೊಬ್ಬರ ನೀಡುತ್ತಿದ್ದಾರೆ. ಅಲ್ಲದೇ ಹವಾಮಾನಕ್ಕೆ ಅನುಸಾರವಾಗಿ ಕೆಲವೊಂದು ನೀರಿನಲ್ಲಿ ಕರಗುವ ರಾಸಾಯನಿಕ ಗೊಬ್ಬರವನ್ನು ಸಿಂಪಡಿಸಲಾಗಿದೆ. ಸಸಿ ಹಚ್ಚಿದ 22 ರಿಂದ 30 ದಿನಗಳೊಳಗೆ ಇದು ಕಾಯಿ ಬಿಟ್ಟಿತು. ಒಟ್ಟು 2 ತಿಂಗಳ ಬೆಳೆಯಾಗಿರುವ ಸುಗರ ಕ್ವೀನ್‌ ತಳಿಯ ಕಲ್ಲಂಗಡಿ ಒಂದು ಸಸಿಗೆ 2 ರಿಂದ 5 ಕೆಜಿ ಇಳುವರಿ ಕೊಟ್ಟಿತು ಎನ್ನುತ್ತಾರೆ ಧರೆಪ್ಪ ಕಿತ್ತೂರ.

ಈ ಬೆಳೆಯನ್ನು ಬೆಳೆಯಲು ಅವರು ವಿನಿಯೋಗಿಸಿದ್ದು ಎಕರೆಗೆ 50ರಿಂದ 60 ಸಾವಿರ ರೂ ಮಾತ್ರ. ಒಂದು ಎಕರೆಗೆ 30ರಿಂದ 35 ಟನ್‌ ಇಳುವರಿ ಬಂದಿದ್ದು, ಸದ್ಯ ಮಾರುಕಟ್ಟೆ
ದರ ಕೆಜಿಗೆ ರೂ. 8 ದೊರೆಯುತ್ತಿದ್ದು, ಒಟ್ಟು ಎರಡು ತಿಂಗಳಲ್ಲಿ ಖರ್ಚು ವೆಚ್ಚಗಳನ್ನು ಕಳೆದು ನೋಡಿದರೆ ಅಂದಾಜು 2 ಲಕ್ಷ ರೂ ಲಾಭ ಬಂದಿದೆ. ಜೊತೆಗೆ ಸಾವಯವ ಕೃಷಿಯ ಮೂಲಕ ಭೂಮಿಯ ಫಲವತ್ತತೆಯನ್ನು ಕಾಪಾಡಿ ಕೊಳ್ಳುವುದರ ಜೊತೆಗೆ ಇನ್ನೂ ಹೆಚ್ಚಿನ ಇಳುವರಿಯನ್ನು ಪಡೆಯಬಹುದಂತೆ. ಇವರು ಓದಿದ್ದು, 8ನೇ ತರಗತಿ. ಆದರೆ ಅವರ ಕೃಷಿಯಲ್ಲಿನ ಪಾಂಡಿತ್ಯ, ಸಾಧನೆ ಅಪಾರ. 22 ವರ್ಷಗಳಿಂದ ತಮ್ಮ ಸ್ವಂತ
ಅನುಭವಗಳೊಂದಿಗೆ ಕೃಷಿಯಲ್ಲಿ ಹಲವಾರು ವಿನೂತನ ಪ್ರಯೋಗಗಳನ್ನು ಮಾಡುತ್ತಾ ಸಾವಯವ ಕೃಷಿಯಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಲಾಭವನ್ನು ಗಳಿಸುತ್ತಿದ್ದರೆ.

ಸುಗರ್‌ ಕ್ವೀನ್‌ ತಳಿಗೆ 12 ತಿಂಗಳು ಬೇಡಿಕೆ ಇರುತ್ತದೆ. ಮುಂಬಯಿ ಇದರ ಪ್ರಮುಖ ಮಾರುಕಟ್ಟೆ. ಸಧ್ಯ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಆಗಿದ್ದರೂ ಲಾಭಕ್ಕೆ ಮಾತ್ರ ಕೊರತೆ ಇಲ್ಲ.

ಹೆಚ್ಚಿನ ಮಾಹಿತಿಗಾಗಿ : 09916238273

ಕಿರಣ ಶ್ರೀಶೈಲ ಆಳಗಿ

For North Karnataka News visit www.uksuddi.in

Comments