ಬೆಳಗಾವಿ: ಕನ್ನಡಿಗನಿಗೆ ಚೂರಿ ಇರಿದ ಎಂಇಎಸ್ ಕಾರ್ಯಕರ್ತ
ಬೆಳಗಾವಿ: ಕನ್ನಡ ಸಂಘಟನೆಯೊಂದರ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆಯ ವೇಳೆ ಎಂಇಎಸ್ ಕಾರ್ಯಕರ್ತನೊಬ್ಬ ಗೂಂಡಾಗಿರಿ ತೋರಿ ಕನ್ನಡಿಗನೊಬ್ಬನಿಗೆ ಚೂರಿ ಇರಿದ ಘಟನೆ ನಡೆದಿದೆ.
ಸೌಕೇಶ್ ಜೈನ್ ಎಂಬಾತನ ಕೈಗೆ ಚೂರಿಯಿಂದ ಇರಿದು ಪರಾರಿಯಾಗಲು ಯತ್ನಿಸಿದ ಎಂಇಎಸ್ ಕಾರ್ಯಕರ್ತರನ್ನುಸ್ಥಳದಲ್ಲಿದ್ದ ವರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದರು.
ಸ್ಥಳದಲ್ಲಿದ್ದ ಪೊಲೀಸರು ಆರೋಪಿಯನ್ನು ಸುತ್ತುವರಿದು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿದ್ದಾರೆ. ಸೌಕೇಶ್ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
For North Karnataka News visit www.uksuddi.in