ಕಳಸಾ: ಮಧ್ಯಾಂತರ ಅರ್ಜಿಗೆ ಓಕೆ
ದಿಲ್ಲಿಯ ಹೌಸ್ಖಾಸ್ ಎನ್ಕ್ಲೇವ್ನಲ್ಲಿರುವ ತನ್ನ ನಿವಾಸದಲ್ಲಿ ಭೇಟಿಯಾದ ಮುಖ್ಯಮಂತ್ರಿ ನೇತೃತ್ವದ ಸರ್ವಪಕ್ಷಗಳ ಮನವಿಗೆ ಓಗೊಟ್ಟ ಅವರು ಮಹ ದಾಯಿ ನ್ಯಾಯಮಂಡಳಿ ಎದುರು ಮಧ್ಯಾಂತರ ಅರ್ಜಿ ಸಲ್ಲಿಸಲು ನಿರ್ಧ ರಿಸಿದ್ದಾರೆ.
ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿ ಮತ್ತು ಮಲಪ್ರಭಾ ಕೊಳ್ಳ ಸಂಪೂರ್ಣವಾಗಿ ಬರ ಪೀಡಿತ ಆಗಿರುವುದನ್ನು ಸರ್ವಪಕ್ಷಗಳ ನಿಯೋಗ ನಾರಿಮನ್ರಿಗೆ ಮನವರಿಕೆ ಮಾಡಿಕೊಟ್ಟಿತ್ತು. ಈ ವೇಳೆ ಅಣೆಕಟ್ಟು ಕಟ್ಟಿ ನೀರು ಹರಿಸುವುದರ ಬಗ್ಗೆ ನಾವು ಮಧ್ಯಾಂತರ ಅರ್ಜಿಯಲ್ಲಿ ಕೋರುವುದು ಬೇಡ. ಬದಲಾಗಿ ಅರಣ್ಯೇತರ ಪ್ರದೇಶದಿಂದ ಏತ ನೀರಾವರಿ ಮೂಲಕ ಈಗಾಗಲೇ ರಚಿಸಲಾಗಿರುವ ಕಾಲುವೆಗಳಿಗೆ ನೀರು ಹರಿಸುವ ಬಗ್ಗೆ ಅರ್ಜಿ ಸಲ್ಲಿಸುವ ಕುರಿತು ನಾರಿಮನ್ ಒಲವು ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.