UK Suddi
The news is by your side.

ಚಳಿಗಾಲ ಮಳೆಗಾಲವಾಗಿ ಬದಲಾಗತ್ತದ

ಆಳಂದ: ‘ಬಸವಣ್ಣನ ಕಾಳಜಿಯಿಂದ ಕಾಪಾಡೋ ತಮ್ಮಾ. ಈ ಚಳಿಗಾಲ ಮಳೆಗಾಲವಾಗಿ ಬದಲಾಗತ್ತದ. ಛಟ್ಟಿ ಅಮಾವಾಸೆ ಮುಂದ ಭರಪೂರ ಮಳೆ ಬರತ್ತದೆ’ ಎಂದು ಕೆರೂರು ಗ್ರಾಮದಲ್ಲಿ ಮಂಗಳವಾರ ನಡೆದ ಬೀರಲಿಂಗೇಶ್ವರ ದೇವಸ್ಥಾನದ ಪಲ್ಲಕ್ಕಿ ಉತ್ಸವದಲ್ಲಿ ಪೂಜಾರಿಗಳ ಹೇಳಿಕೆ ಆಲಿಸಿದ ಅಪಾರ ರೈತರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಬರಗಾಲ ಆವರಿಸಿ ರೈತರು ಜಾನುವಾರುಗಳಿಗೆ ಮೇವು, ನೀರಿನ ಸಮಸ್ಯೆಯಿಂದ ಮಾರಾಟಕ್ಕೆ ತೋಡಗಿರುವ ಸಂಕಟದಲ್ಲಿದ್ದಾರೆ. ತಾಲ್ಲೂಕಿನ ಮಾದನ ಹಿಪ್ಪರಗಿ, ದರ್ಗಾ ಶಿರೂರು, ನಿಂಗದಳ್ಳಿ, ಕಾಮನಹಳ್ಳಿ ಸುತ್ತಲಿನ ಗ್ರಾಮದ ರೈತರಿಗೆ ಬೀರಲಿಂಗೇಶ್ವರ ದೇವರ ಪೂಜಾರಿಗಳ ಹೇಳಿಕೆ ಮೇಲೆ ವಿಶೇಷ ನಂಬಿಕೆ ಇದೆ.

ಐದಾರು ಜನ ದೇವರ ಪೂಜಾರಿಗಳು ಕಬ್ಬಿಣದ ಬೆತ್ತ ಕೈಯಲ್ಲಿ ಹಿಡಿದು ರೋಮಾಂಚನಗೊಂಡವರಂತೆ ಪರಸ್ಪರರು ಭಾರಿಸಿಕೊಂಡು ದೇವವಾಣಿ ನುಡಿದರು. ಪ್ರತಿವರ್ಷ ಯುಗಾದಿ ಮತ್ತು ದೀಪಾವಳಿ ಹಬ್ಬಕ್ಕೆ ಪಲ್ಲಕ್ಕಿ ಉತ್ಸವ ಈ ಗ್ರಾಮದಲ್ಲಿ ನಡೆಯುತ್ತದೆ.

For North Karnataka News visit www.uksuddi.in

Comments