ಬನಹಟ್ಟಿ: ಮಲ್ಲಿಕಾರ್ಜುನ ಜಾತ್ರೆ ನಿಮಿತ್ತ ನಿಕಾಲಿ ಕುಸ್ತಿ

ಬಾಗಲಕೋಟೆ: ಬನಹಟ್ಟಿಯ ಮಲ್ಲಿಕಾರ್ಜುನ ಜಾತ್ರೆ ನಿಮಿತ್ತ ಜಗಜಟ್ಟಿಗಳ ನಡುವೆ ಅದ್ಧೂರಿ ಜಂಗಿ ನಿಕಾಲಿ ಕುಸ್ತಿಗಳು ಜರುಗಿದವು, ಕುಸ್ತಿ ವೀಕ್ಷಿಸಲು ಅನೇಕ ಗ್ರಾಮ ಮತ್ತು ಪಟ್ಟಣಗಳಿಂದ ಅಪಾರ ಪ್ರಮಾಣದ ಜನಸಾಗರ ಹರಿದು ಬಂದಿತ್ತು.
ಬನಹಟ್ಟಿಯ ಹಿರಿಯರಾದ ಕಾಡಪ್ಪ ಜಿಡ್ಡಿಮನಿ ಕುಸ್ತಿ ಮೈದಾನಕ್ಕೆ ಪೂಜೆ ಸಲ್ಲಿಸಿದರು. ಆರಂಭದಲ್ಲಿ 40ಕ್ಕೂ ಹೆಚ್ಚು ಕುಸ್ತಿಪಟುಗಳು ವಿಭಿನ್ನ ರೀತಿಯಲ್ಲಿ ಟಾಂಗ್ಗಳನ್ನು ಹಾಕಿ ಕುಸ್ತಿಯಾಡಿ ನೆರೆದ ಜನರನ್ನು ರಂಜಿಸಿದರು. 60ಕ್ಕೂ ಹೆಚ್ಚು ಜೋಡಿಗಳು ವಿವಿಧ ಬಂಗಿಗಳಲ್ಲಿ ಕುಸ್ತಿಗಳನ್ನಾಡಿ ನೆರೆದ ಜನರಿಗೆ ಮನರಂಜನೆ ನೀಡಿದರು.
For North Karnataka News visit www.uksuddi.in