UK Suddi
The news is by your side.

ಎಲೈಟ್‌ ಮಿಸ್‌ ಇಂಡಿಯಾಗೆ ಹುಬ್ಬಳ್ಳಿ ಹುಡುಗಿ ಪ್ರಿಯಾಂಕ ಪ್ರವೇಶ

ಹುಬ್ಬಳ್ಳಿ: ದೆಹಲಿಯ ಪಾಮ್‌ ಗ್ರೀನ್‌ ರೆಸಾರ್ಟ್‌ನಲ್ಲಿ ನ.21ರಂದು ನಡೆಯುವ ಎಲೈಟ್‌ ಮಿಸ್‌ ಇಂಡಿಯಾ-2015 ಸೌಂದರ್ಯ ಸ್ಪರ್ಧೆಗೆ ಹುಬ್ಬಳ್ಳಿ ಹುಡುಗಿ ಪ್ರಿಯಾಂಕಾ ಕೋಳ್ವೆಕರ ಅವಕಾಶ ಪಡೆದಿದ್ದಾರೆ.

ಒಟ್ಟು 21 ಸುಂದರಿಯರು ಕಣದಲ್ಲಿದ್ದು, ಅವರಲ್ಲಿ ಮೂವರು ಕರ್ನಾಟಕದವರು. ಮುರಾರ್ಜಿ ನಗರದ ನಿವಾಸಿ 22ರ ಹರೆಯದ ಪ್ರಿಯಾಂಕಾ ಕೆಎಲ್‌ಇ ಐಟಿ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದು, ಸದ್ಯ ಐಬಿಎಂಆರ್‌ ಕಾಲೇಜಿನಲ್ಲಿ ಎಂಬಿಎ ಪ್ರಥಮ ಸೆಮಿಸ್ಟರ್‌
ಕಲಿಯುತ್ತಿದ್ದಾರೆ.

For North Karnataka News visit www.uksuddi.in

Comments