UK Suddi
The news is by your side.

ಬಿಗ್ ಬಾಸ್ ರಿಯಾಲಿಟಿ ಶೋ ರದ್ದು ಮಾಡಬೇಕೆಂದು ಸಭಾಪತಿಗೆ ಪತ್ರ

ಬಿಗ್ ಬಾಸ್ ರಿಯಾಲಿಟಿ ಶೋನಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ. ಹಾಗಾಗಿ ಇಂತಹ ರಿಯಾಲಿಟಿ ಶೋವನ್ನು ರದ್ದು ಮಾಡಬೇಕೆಂದು ಸರ್ಕಾರಿ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್ ಅವರು ಬುಧವಾರ ವಿಧಾನಪರಿಷತ್ ಸಭಾಪತಿಗೆ ಪತ್ರ ಮುಖೇನ ಮನವಿ ಮಾಡಿಕೊಂಡಿದ್ದಾರೆ.

ಬಿಗ್ ಬಾಸ್ ಸೀಸನ್ ನ 3ರಲ್ಲಿ ಹುಚ್ಚ ವೆಂಕಟ್ ಮತ್ತೊಬ್ಬ ಸ್ಪರ್ಧಿ ರವಿ ಮೂರೂರ್ ಮೇಲೆ ನಡೆಸಿದ ಹಲ್ಲೆ ಪ್ರಕರಣವನ್ನು ಮಾಧ್ಯಮಗಳು ನಿರಂತರವಾಗಿ ಪ್ರಸಾರ ಮಾಡುತ್ತಿವೆ. ಕನ್ನಡದ ಬಿಗ್ ಬಾಸ್ ಶೋನಿಂದ ಯಾವ ಪ್ರಯೋಜನವೂ ಇಲ್ಲ. ರಿಯಾಲಿಟಿ ಶೋನಲ್ಲಿನ ಘಟನೆಗಳನ್ನೇ ಟಿವಿ ಚಾನೆಲ್ ಗಳು ದೊಡ್ಡದಾಗಿ ಬಿಂಬಿಸಿ ಪ್ರಸಾರ ಮಾಡುತ್ತಿರುವುದಾಗಿ ಪತ್ರದಲ್ಲಿ ದೂರಿದ್ದಾರೆ.

ಇಂತಹ ರಿಯಾಲಿಟಿ ಶೋವನ್ನು ರದ್ದು ಮಾಡಲು ಮತ್ತು ನಿಯಂತ್ರಣ ಹೇರುವ ಕ್ರಮ ಕೈಗೊಳ್ಳಬೇಕು. ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋವನ್ನು ಕೂಡಾ ರದ್ದು ಮಾಡುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ವೆಂಕಟೇಶ್ ಹೇಳಿದರು.

For North Karnataka News visit www.uksuddi.in

Comments