UK Suddi
The news is by your side.

ಗಿರೀಶ್‌ ಕಾರ್ನಾಡ್‌ರ ಧಾರವಾಡ ಮನೆ 2.48 ಕೋಟಿಗೆ ಮಾರಾಟ

ಧಾರವಾಡ: ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಗಿರೀಶ್‌ ಕಾರ್ನಾಡ್‌ ಧಾರವಾಡದ ಸಾರಸ್ವತಪುರದಲ್ಲಿದ್ದ ತಮ್ಮ (ಪಿತ್ರಾರ್ಜಿತ ಆಸ್ತಿ) ನಿವಾಸವನ್ನು ಪಶ್ಚಿಮ ಬಂಗಾಳ
ಮೂಲದ ನಿವೃತ್ತ ಐಎಎಸ್‌ ಅಧಿಕಾರಿ ಮಧು ಬಾಧುರಿಗೆ ಮಾರಾಟ ಮಾಡಿದ್ದಾರೆ.

ಮಧು ಬಾಧುರಿ ಈ ಹಿಂದೆ ಅಮೆರಿಕಕ್ಕೆ ರಾಯಭಾರಿಯಾಗಿ ಕೆಲಸ ನಿರ್ವಹಿಸಿದ್ದರು.
ಅಂದಾಜು 2.75 ಕೋಟಿ ರೂ.ಗೆ ಈ ಮನೆ ಮಾರಾಟವಾಗಿದೆ. ಮಂಗಳವಾರ ಮಧು
ಬಾಧುರಿ ಹೆಸರಿಗೆ ಮನೆಯ ಕಾಗದ ಪತ್ರಗಳು ನೋಂದಣಿಯಾಗಿವೆ. ಮಂಗಳವಾರ ಬೆಳಗ್ಗೆ 11:30ಕ್ಕೆ ಇಲ್ಲಿನ ಉಪನೋಂದಣಾಧಿಕಾರಿ ಕಚೇರಿಗೆ ಆಗಮಿಸಿದ ಕಾರ್ನಾಡ್‌, 12:30ರವರೆಗೂ ಕಚೇರಿಯಲ್ಲಿದ್ದು, ಕಾಗದ ಪತ್ರಗಳ ವ್ಯವಹಾರ ಮುಗಿಸಿ ತೆರಳಿದರು.

For North Karnataka News visit www.uksuddi.in

Comments