UK Suddi
The news is by your side.

ಗೀಗೀ ಪದಗಳನ್ನು ಉಳಿಸಿ -ಬೆಳೆಸಿ: ಬಸವಲಿಂಗಯ್ಯ

ಧಾರವಾಡ: ಉತ್ತರ ಕರ್ನಾಟಕದ ಶ್ರೀಮಂತ ಕಲಾ ಪ್ರಕಾರವಾಗಿರುವ ಲಾವಣಿ ಪದ ಕಲಾ ಪ್ರಕಾರವನ್ನು ಉಳಿಸಿ, ಬೆಳೆಸುವುದು ಅಗತ್ಯವಿದೆ ಎಂದು ಜಾನಪದ ಸಂಶೋಧನ ಕೇಂದ್ರದ ಅಧ್ಯಕ್ಷ ಬಸಲಿಂಗಯ್ಯ ಹಿರೇಮಠ ಹೇಳಿದರು.

ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಾನಯಾನ ಸ್ವರ ಮಧುರ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿ ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರ ಸಂಗ್ರಾಮದಲ್ಲಿ ಲಾವಣಿ ಪದಗಳ ಮೂಲಕ ಜನರಿಗೆ ತಿಳಿಸಲ್ಪಡುತ್ತಿದ್ದ ಜಾನಪದ ಹಾಗೂ ಸಂಗೀತಗಳು ಅಳಿವಿನ ಅಂಚಿನಲ್ಲಿವೆ. ಇಂದಿನ ಯುವ ಕಲಾವಿದರಿಗೆ ಅವುಗಳ ಅರಿವು ಅವಶ್ಯಕತೆ ಇರುತ್ತದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉತ್ತರ ಕರ್ನಾಟಕದ ಲಾವಣಿ ಪದಗಳನ್ನು ಗಾನಯಾನ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಂಡು ಪ್ರಚಾರ ಮಾಡಬೇಕು ಎಂದರು.

For North Karnataka News visit www.uksuddi.in

Comments