ಡಿ.15 ರಂದು ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ಎದುರು ರೈತರ ಚಳವಳಿ
ಬೆಳಗಾವಿ: ಕಬ್ಬಿನ ಬಾಕಿ ಹಣ ಪಾವತಿ, ಕೇಂದ್ರದ ಎಫ್ಆರ್ಪಿ ದರ ನಿಗದಿ ಸೇರಿದಂತೆ ವಿವಿಧ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ನೀಡದಿದ್ದರೆ ಡಿ.15 ರಂದು ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ಎದುರು ರೈತರು
ಚಳವಳಿ ನಡೆಸಲಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರಬೂರ ಶಾಂತಕುಮಾರ ಎಚ್ಚರಿಕೆ ನೀಡಿದರು.
ನಗರದಲ್ಲಿ ಮಂಗಳವಾರ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ಗೆ 1500 ರಿಂದ 1800 ರೂ ದರ ಮಾತ್ರ ನೀಡಲಾಗುವುದು ಎಂದು
ಅನಾಮಧೇಯ ಹೆಸರಿನಲ್ಲಿ ಜಾಹೀರಾತು ನೀಡಿರುವ ಸಕ್ಕರೆ ಕಾರ್ಖಾನೆಗಳು ರೈತರನ್ನು ಗೊಂದಲದಲ್ಲಿ ಮುಳುಗಿಸಲು ವ್ಯವಸ್ಥಿತ ಕುತಂತ್ರ ನಡೆಸಿವೆ ಎಂದರು.
For North Karnataka News visit www.uksuddi.in