ಕಳಸಾ-ಬಂಡೂರಿ ಸಂಧಾನಕ್ಕೆ ಕೇಂದ್ರ ಸರ್ಕಾರ ಪತ್ರ
ಕಳಸಾ- ಬಂಡೂರಿ ವಿವಾದವನ್ನು ನ್ಯಾಯಾಧಿಕರಣದ ಹೊರಗೆ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ನಡುವೆ ಮಾತುಕತೆ ಮೂಲಕ ಬಗೆಹರಿಸುವ ಕುರಿತಂತೆ ಪೂರಕ ಬೆಳವಣಿಗೆಯಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಮಾಹಿತಿ ರವಾನೆಯಾಗಿದೆ.
ಕಳಸಾ- ಬಂಡೂರಿ ಕುರಿತಂತೆ ಸಂಸತ್ತಿನಲ್ಲಿ ಸಂಸದ ಸುರೇಶ್ ಅಂಗಡಿ ಅವರು ಮಾಡಿದ್ದ
ಪ್ರಸ್ತಾಪಕ್ಕೆ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರು ನೀಡಿದ್ದ ಉತ್ತರವನ್ನು ಭರವಸೆಯಾಗಿ ಪರಿವರ್ತಿಸಿರುವ ಕೇಂದ್ರ ಸರ್ಕಾರ ಈ ಕುರಿತಂತೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಕಳುಹಿಸಿದೆ.
For North Karnataka News visit www.uksuddi.in