ಬೆಂಗಳೂರಿನಲ್ಲಿ ಬೆಪ್ಪಾದ ರಾಹುಲ್ ಗಾಂಧಿ
ಬೆಂಗಳೂರಿನ ಮೌಂಟ್ ಕಾರ್ಮಲ್ ಬಾಲಕಿಯರ ಕಾಲೇಜಿನಲ್ಲಿ ವಿದ್ಯಾರ್ಥಿನಿಯರೊಂದಿಗೆ ಬುಧವಾರ ಸಂವಾದ ನಡೆಸಿದ ರಾಹುಲ್ ಗಾಂಧಿ, ಈ ವೇಳೆ ಕೇಂದ್ರ ಸರ್ಕಾರದ ಕಾರ್ಯಕ್ರಮವನ್ನು ಟೀಕಿಸಿದರು. “ಬಿಜೆಪಿ ಸರ್ಕಾರಕ್ಕೆ ದೇಶದ ಅಭಿವೃದ್ಧಿ ಬಗ್ಗೆ ದೂರದೃಷ್ಟಿ ಇಲ್ಲ. ದೇಶವನ್ನು ಸ್ವತ್ಛ ಮಾಡುತ್ತೇವೆಂದು ಸ್ವತ್ಛ ಭಾರತ್ ಯೋಜನೆ ತಂದರು. ಅದು ಕೆಲಸ ಮಾಡುತ್ತಿರುವುದು ನನಗಂತೂ ಕಾಣುತ್ತಿಲ್ಲ. ನಿಮಗೇನಾದರೂ ಕಾಣುತ್ತಿದೆಯೇ?’ ಎಂದು ಪ್ರಶ್ನಿಸಿದರು. ಆಗ ವಿದ್ಯಾರ್ಥಿನಿಯರು “ಹೌದು’ ಎಂದು ದೊಡ್ಡ ಧ್ವನಿಯ ಉತ್ತರ ಒಕ್ಕೊರಲಿನ ಉತ್ತರ ನೀಡಿದರು. ಈ ವೇಳೆ ಪೇಚಿಗೆ ಸಿಲುಕಿದ ರಾಹುಲ್ ಗಾಂಧಿ ಮತ್ತೆ “ಈ ಯೋಜನೆ ಕೆಲಸ ಮಾಡುತ್ತಿದೆಯಾ’ ಎಂದು ಖಚಿತ ಪಡಿಸಿಕೊಳ್ಳಲು ಪ್ರಶ್ನೆ ಪುನರಾವರ್ತಿಸಿದರು. ಆಗಲೂ ವಿದ್ಯಾರ್ಥಿನಿಯರು ಏರು ಧ್ವನಿಯಲ್ಲಿ “ಹೌದು ಕೆಲಸ ಮಾಡುತ್ತಿದೆ’ ಎಂದರು.
ಇದಕ್ಕೆ ಅಚ್ಚರಿಗೊಂಡಂತೆ ಮುಖಚರ್ಯೆ ಮಾಡಿದ ರಾಹುಲ್ ಗಾಂಧಿ, ಮೋದಿ ಅವರ ಮೇಕ್ ಇನ್ ಇಂಡಿಯಾ ಫಲಿತಾಂಶ ನೀಡುತ್ತಿದೆಯೇ ಎಂದು ಮತ್ತೂಂದು ಪ್ರಶ್ನೆ ಹರಿಯಬಿಟ್ಟರು. ಅದಕ್ಕೂ ವಿದ್ಯಾರ್ಥಿನಿಯರಿಂದ ಬಂದ ಉತ್ತರ “ಹೌದು’ ಎಂಬುದು. ಇದನ್ನು ಒಪ್ಪದ ರಾಹುಲ್ ಗಾಂಧಿ ಅವರು ಸ್ವತ್ಛ ಭಾರತ್ ಕೆಲಸ ಮಾಡುತ್ತಿರುವುದು ನನಗೆ ಕಾಣುತ್ತಿಲ್ಲ. ಮೇಕ್ ಇನ್ ಇಂಡಿಯಾ ಕೂಡ ಫಲಿತಾಂಶ ನೀಡಿಲ್ಲ. ನೀವೇ ಹೇಳಿ, ಯುವಕರಿಗೆ ಉದ್ಯೋಗ ಸೃಷ್ಟಿ ಆಗುತ್ತಿದೆಯೇ ಎಂದು ಮತ್ತೂಂದು ಪ್ರಶ್ನೆ ಹಾಕಿದರು. ಇದಕ್ಕೆ ಕೆಲವರು ಹೌದು ಎಂದೂ, ಕೆಲವರು ಇಲ್ಲ ಎಂದೂ ಉತ್ತರಿಸಿದರು.
For North Karnataka News visit www.uksuddi.in