UK Suddi
The news is by your side.

ಕಲಾದಗಿ ಗ್ರಾಮದಲ್ಲಿ 144 ಸೆಕ್ಷನ್ ಜಾರಿ

ಬಾಗಲಕೋಟೆ ಜಿಲ್ಲೆಯ ಕಲಾದಗಿ ಪಂಚಗೃಹ ಸಂಸ್ಥಾನ ಹಿರೇಮಠ  ಶ್ರೀಗುರುಲಿಂಗೇಶ್ವರ ಮಠದ ನೂತನ ಪೀಠಾಧಿಕಾರಿ ನೇಮಕ ವಿವಾದ ಈಗ ಜೋರಾಗಿದ್ದು, ಭಕ್ತರ ಎರಡು ಗುಂಪುಗಳ ಮಧ್ಯೆ ಜಟಾಪಟಿ ಹಿನ್ನೆಲೆಯಲ್ಲಿ ಕಲಾದಗಿ ಗ್ರಾಮದಲ್ಲಿ 144 ಸೆಕ್ಷನ್ ಜಾರಿಯಾಗಿದೆ.
ಇಂದು ಸಂಜೆಯಿಂದ ನಾಳೆ ಸಾಯಂಕಾಲ 6 ಗಂಟೆಯ ವರೆಗೆ 144 ಸೆಕ್ಷನ್ ಜಾರಿಗೊಳಿಸಿ ಬಾಗಲಕೋಟೆ ತಹಶೀಲ್ದಾರ್ ಚಾಮರಾಜ್ ಪಾಟೀಲ್ ಆದೇಶಿಸಿದ್ದಾರೆ. ಕಲಾದಗಿ ಗ್ರಾಮದ ಸುತ್ತ ಪೊಲೀಸ್ ಬಿಗಿಭದ್ರತೆ ನಿಯೋಜಿಸಿದ್ದು, ನೂತನ ಪೀಠಾಧಿಪತಿಯಾಗಲಿರುವ ಗಂಗಧರ್ ಶ್ರೀಗಳನ್ನು ಅಧಿಕಾರಿಗಳು ಸ್ಥಳಾಂತರ ಮಾಡಿದ್ದಾರೆ.
ಏನಿದು ವಿವಾದ? ಭಕ್ತರ ಭಾರಿ ವಿರೋಧದ ನಡುವೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಬುಧವಾರ ನಡೆದ ಸಭೆಯಲ್ಲಿ ಕಲಾದಗಿ ಪಂಚ­ಗೃಹ ಸಂಸ್ಥಾನ ಹಿರೇ­ಮಠಕ್ಕೆ ಹರಿಹರ ಕಲ್ಲಪ್ಪ ದೇವರಮಠದ ಕೆ.ಎಂ.ಗಂಗಾ­ಧರ­­ಸ್ವಾಮಿ ಅವರನ್ನು ಉತ್ತರಾ ಧಿಕಾರಿಯನ್ನಾಗಿ ಘೋಷಿಸಲಾಗಿತ್ತು. ಇವರ ನೇಮಕಕ್ಕೆ ಭಕ್ತರ ಇನ್ನೊಂದು ಗುಂಪು ವಿರೋಧಿಸಿತ್ತು.
ಕೃಪೆ : ಪಬ್ಲಿಕ್ ಟಿವಿ 
For North Karnataka News visit www.uksuddi.in

Comments