UK Suddi
The news is by your side.

ಐಸಿಸ್‌ ಉಗ್ರರ ಭೀತಿ; ಗೋವ ಪ್ರವಾಸ ಕೈಗೊಳ್ಳಬೇಡಿ : ರಷ್ಯಾ ಸಲಹೆ

ರಷ್ಯಾ ತಮ್ಮ ದೇಶದ ನಾಗರಿಕರಿಗೆ ಪ್ರವಾಸಕ್ಕೆ ತೆರಳಲು ಸುರಕ್ಷಿತ ಪ್ರವಾಸಿ ತಾಣಗಳ ಪಟ್ಟಿ ಬಿಡುಗಡೆ ಮಾಡಿದೆ ಆ ಪಟ್ಟಿಯಲ್ಲಿ ಗೋವಾ ಅನ್ನು ಕೈ ಬಿಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ . 
ಐಸಿಸ್‌ ಉಗ್ರರ ವಿರುದ್ಧ ಸಮರ ಸಾರಿರುವ ರಷ್ಯಾ ಮತ್ತು ಆ ದೇಶದ ನಾಗರಿಕರನ್ನು ಗುರಿಯಾಗಿರಿಸಿಕೊಂಡು ಭಾರೀ ದಾಳಿ ಮಾಡಲು ಉಗ್ರರು ಸಜ್ಜಾಗಿದ್ದಾರೆ. ಅತಿ ಹೆಚ್ಚು ಸಂಖ್ಯೆಯಲ್ಲಿ ರಷ್ಯಾದ ಪ್ರವಾಸಿಗರು ಪ್ರತಿ ವರ್ಷ ಗೋವಾಕ್ಕೆ ಆಗಮಿಸುತ್ತಾರೆ. ಅವರನ್ನು ಗುರಿಯಾಗಿರಿಸಿಕೊಂಡು ಉಗ್ರ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ ಮತ್ತು ಕ್ಯೂಬಾ , ಉತ್ತರ ವಿಯೆಟ್ನಾಂ ಮತ್ತು ದಕ್ಷಿಣ ಚೀನಾ ಪ್ರವಾಸ ಕೈಗೊಳ್ಳಲು ಸುರಕ್ಷಿತ ತಾಣಗಳೆಂದು ಹೇಳಿದೆ.
For North Karnataka News visit www.uksuddi.in

Comments