UK Suddi
The news is by your side.

ಬಾಗಲಕೋಟ : ಶಾಲಾ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಸರ್ಕಸ್ ಪ್ರದರ್ಶನ

ಬಾಗಲಕೋಟ : ಬೆಂಗಳೂರಿನ ಗ್ರೇಟ್ ಪ್ರಭಾತ್ ಸರ್ಕಸ್ ಅವರು ನವನಗರದ ಅಂಜುಮನ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಡಿಸೆಂಬರ 7ರ ವರೆಗೆ ಸರ್ಕಸ್ ಪ್ರದರ್ಶನ ನೀಡಲಿದ್ದು, ಶಾಲಾ ಮಕ್ಕಳಿಗಾಗಿ ರಿಯಾಯಿತಿ ದರದಲ್ಲಿ ಪ್ರವೇಶ ಕಲ್ಪಿಸಲಾಗಿದೆ.

ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಲ್ಲಿ ಮನವಿ ಮಾಡಿಕೊಂಡಿದ್ದು, ಜಿಲ್ಲೆಯ ಎಲ್ಲ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಹಾಗೂ ಶಾಲಾ ಅವಧಿಯ ನಂತರ ಸಂಜೆ 4 ಗಂಟೆಗೆ ಪ್ರಾರಂಭವಾಗುವ ಎರಡನೇ ಶೋದಲ್ಲಿ ಸರ್ಕಸ್ ವೀಕ್ಷಿಸಲು ಇಲಾಖೆ ಅನುಮತಿ ನೀಡಿದ್ದು, ಸಂಬಂಧಪಟ್ಟ ಶಾಲಾ ಮುಖ್ಯಸ್ಥರು ತಮ್ಮ ಶಾಲೆಯ ಮಕ್ಕಳನ್ನು ಕರೆದುಕೊಂಡು ಬಂದು ರಿಯಾಯಿತಿ ದರದಲ್ಲಿ ಪ್ರದರ್ಶನ ವೀಕ್ಷಿಸಬಹುದಾಗಿದೆ.

ಪ್ರತಿ ಶಾಲಾ ಮಕ್ಕಳಿಗೆ ಚೇರ್ ದರ 50 ಹಾಗೂ ಗ್ಯಾಲರಿ 30 ರೂ. ಆಗಿದ್ದು, ಶಾಲಾ ವತಿಯಿಂದ ಆಗಮಿಸಿದವರಿಗೆ ಮಾತ್ರ ರಿಯಾಯಿತಿ ನೀಡಲಾಗುತ್ತಿದೆ. ಈ ಪ್ರದರ್ಶನ ಡಿಸೆಂಬರ 7ರ ವರೆಗೆ ಮಾತ್ರ ನಡೆಯಲಿದ್ದು, ಶಾಲಾ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಂಪನಿಯ ವ್ಯವಸ್ಥಾಪಕ ಬಸವರಾಜ ತಿಳಿಸಿದ್ದಾರೆ

For North Karnataka News visit www.uksuddi.in

Comments