UK Suddi
The news is by your side.

ನಂದಗಡ ಬಳಿ ಮರಕ್ಕೆ ಕಾರು ಡಿಕ್ಕಿ, 3 ಸಾವು

ಬೆಳಗಾವಿ: ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ತಡರಾತ್ರಿ ಖಾನಾಪುರದ ನಂದಗಡ ಬಳಿ ನಡೆದಿದೆ. ಕಾರಿನಲ್ಲಿದ್ದ ಗೋಕಾಕ್​ನ ಬಿಜೆಪಿ ಮುಖಂಡ, ಉದ್ಯಮಿ ಮಹೇಶ್ ಅಂಗಡಿ (40), ಬಸವರಾಜ ಮೊಗದೊಮ್ಮ (61), ಸದಾನಂದ (55) ಮೃತಪಟ್ಟ ದುರ್ದೈವಿಗಳು.

3 ಗಂಟೆ ಸುಮಾರಿಗೆ ನಡೆದ ಘಟನೆಯಲ್ಲಿ ಚಾಲಕ ಸೇರಿ ಆರು ಮಂದಿಯಿದ್ದ ಕಾರು ಸಂಪೂರ್ಣ ಜಖಂಗೊಂಡಿದ್ದು, ಉಳಿದ ಮೂವರಿಗೆ ಗಾಯಗಳಾಗಿವೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

For North Karnataka News visit www.uksuddi.in

Comments