UK Suddi
The news is by your side.

ಜಾಸ್ತಿ ಇಂಟರ್ನೆಟ್ ಬಳಸಿದ್ರೆ ಬ್ಲಡ್ ಪ್ರೆಷರ್ ಹೆಚ್ಚುತ್ತೆ!

ನೀವೂ ತುಂಬಾ ಇಂಟರ್ನೆಟ್ ಬಳಕೆ ಮಾಡುತ್ತಿದ್ದೀರಾ? ದಿನದ ಹೆಚ್ಚೆಚ್ಚು ಸಮಯವನ್ನು ಇಂಟರ್ನೆಟ್ ಬಳಕೆಯಲ್ಲಿ ಕಳೆಯುತ್ತಿದ್ದೀರಾ? ಹಾಗಾದರೆ ತಪ್ಪದೇ ಈ ಸುದ್ದಿಯನ್ನೊಮ್ಮೆ ಓದಿ. ನಿಮ್ಮ ಹೆಚ್ಚೆಚ್ಚು ಸಮಯವನ್ನು ಇಂಟರ್ನೆಟ್​ನಲ್ಲಿ ಕಳೆದರೆ ಸಹಜವಾಗಿ ಅನಾರೋಗ್ಯಕರವಾದ ದೇಹಭಾರ ಮತ್ತು ರಕ್ತದೊತ್ತಡ ಹೆಚ್ಚಲಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ.

 ಇಂದು ಅನೇಕ ಯುವಕ-ಯುವತಿಯರು ವಾರದಲ್ಲಿ ಕನಿಷ್ಠ 14 ಗಂಟೆ ಇಂಟರ್ನೆಟ್ ಬಳಕೆಯಲ್ಲಿರುತ್ತಾರೆ. ಇಂಥವರಲ್ಲಿ ರಕ್ತದೊತ್ತಡ ಹೆಚ್ಚಿರುವುದು ಕಂಡುಬಂದಿದೆ. ಆದರೆ ಇಂಟರ್ನೆಟ್ ಬಳಕೆ ಇಂದು ಜೀವನದ ಒಂದು ಅಂಗ ಎನ್ನುವಂತಾಗಿದೆ ಎಂದು ಈ ಸಂಬಂಧ ಅಧ್ಯಯನ ನಡೆಸಿರುವ ಅಮೆರಿಕದ ಹೆನ್ರಿ ಫೋರ್ಡ್ ಆಸ್ಪತ್ರೆಯ ಸಂಶೋಧಕ ಆಂಡ್ರಿಯಾ ಕ್ಯಾಸಿಡಿ ಬುಷ್ರೋ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ತಮ್ಮ ಅಧ್ಯಯನದ ಪ್ರಕಾರ ಸರಾಸರಿ ವಾರದಲ್ಲಿ 25 ಗಂಟೆ ಇಂಟರ್ನೆಟ್ ಬಳಕೆ ಸಾಮಾನ್ಯವಾಗಿರುವುದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.

ಈ ಅಧ್ಯಯನಕ್ಕಾಗಿ ಸಂಶೋಧಕರು 14ರಿಂದ 17 ವರ್ಷದೊಳಗಿನ 335 ಯುವಕ-ಯುವತಿಯರನ್ನು ಬಳಸಿಕೊಂಡಿದ್ದಾರೆ. ಇವರಲ್ಲಿ ಶೇಕಡಾ 43ರಷ್ಟು ಮಂದಿಯಲ್ಲಿ ದೇಹದ ಭಾರ ಅನಾರೋಗ್ಯಕರವಾಗಿರುವುದು ಕಂಡುಬಂದಿದೆ. ಇದಕ್ಕೆ ದನಿಗೂಡಿಸಿರುವ ಸಂಶೋಧಕ ಆಂಡ್ರಿಯಾ ಕ್ಯಾಸಿಡಿ ಬುಷ್ರೋ ‘ಮಕ್ಕಳು ಮನೆಯಲ್ಲಿ ಹೆಚ್ಚು ಕಾಲ ಇಂಟರ್ನೆಟ್ ಬಳಕೆಯಲ್ಲಿ ಇರದಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿ. ವಾರದಲ್ಲಿ ಐದು ದಿನ ಮತ್ತು ಪ್ರತಿದಿನ 2 ಗಂಟೆ ಇಂಟರ್ನೆಟ್ ಬಳಕೆ ಉತ್ತಮ. ಇದರಿಂದ ಯಾವುದೇ ಅಡ್ಡ ಪರಿಣಾಮ ಆಗದು ಎಂದಿದ್ದಾರೆ.

For North Karnataka News visit www.uksuddi.in

Comments