ಬೆಳಗಾವಿ : ಶಂಕಿತ ಐಸಿಸ್ ಉಗ್ರನ ಬಂಧನ
ಬೆಳಗಾವಿ: ಭಾರತದ ಮೇಲೆ ಐಸಿಸ್ ದಾಳಿ ಮಾಡಲು ಸಂಚು ರೂಪಿಸುತ್ತಿದೆ ಎನ್ನುವ ಗುಪ್ತಚರ ಮಾಹಿತಿ ಬೆನ್ನಲ್ಲೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಶಂಕಿತ ಐಸಿಸ್ ಉಗ್ರನ ಬಂಧನವಾಗಿದೆ.
ಮೊಹಮ್ಮದ್ ಹುಸೇನ್ ಖುರೇಷಿ(21) ಬಂಧಿತ ಶಂಕಿತ ಉಗ್ರ. ಆಂತರಿಕ ಭದ್ರತಾ ವಿಭಾಗ ಈತನನ್ನು ಬಂಧಿಸಿದ್ದು ಹಿಂಡಲಗಾ ಜೈಲಿಗೆ ಖುರೇಷಿಯನ್ನು ರವಾನಿಸಿದ್ದಾರೆ.
ಸೋಮವಾರ ಬೆಳಗಾವಿ ವಿಮಾನ ನಿಲ್ದಾಣದ ಫೋಟೋ ತೆಗೆಯುವಾಗ ಈತನ ಬಂಧನವಾಗಿದೆ. ವಿಚಾರಣೆ ವೇಳೆ ಆತನ ಬಳಿಯಲ್ಲಿ ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣದ ಫೋಟೋ ಇರುವುದು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
For North Karnataka News visit www.uksuddi.in