ರಣಜಿ ಟ್ರೋಫಿ: ಕರ್ನಾಟಕಕ್ಕೆ ಸೋಲು

ಹ್ಯಾಟ್ರಿಕ್ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಪ್ರಶಸ್ತಿ ಜಯಿಸುವ ಹಾಲಿ ಚಾಂಪಿಯನ್ಸ್ ಕರ್ನಾಟಕ ತಂಡದ ಕನಸು ನುಚ್ಚುನೂರಾಗಿದೆ. ಪ್ರಸಕ್ತ ಟೂರ್ನಿಯ ನಾಕೌಟ್ ಹಂತಕ್ಕೇರುವ ನಿರ್ಣಾಯಕ ಪಂದ್ಯದಲ್ಲಿ ಕರ್ನಾಟಕ ತಂಡ ದುರ್ಬಲ ಮಹಾರಾಷ್ಟ್ರ ವಿರುದ್ಧ 53 ರನ್ಗಳಿಂದ ಸೋಲನುಭವಿಸುವ ಮೂಲಕ ಲೀಗ್ ಹಂತದಲ್ಲೇ ಹೊರಬಿದ್ದು ಮುಖಭಂಗ ಎದುರಿಸಿದೆ. ಜತೆಗೆ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಸತತ 34 ಪಂದ್ಯಗಳಿಂದ ಸೋಲು ಕಾಣದಿದ್ದ ಕರ್ನಾಟಕದ ಅಜೇಯ ಓಟಕ್ಕೆ ಬ್ರೇಕ್ ಬಿದ್ದಿದೆ.
For North Karnataka News visit www.uksuddi.in