ಸುಖವಾದ ನಿದ್ದೆ ಬರಬೇಕಾದರೆ, ರಾತ್ರಿ 10.30ಕ್ಕೆ ಮಲ್ಕೊಳ್ಳಿ!
ಅಷ್ಟೇ ಅಲ್ಲದೇ ಸುಖವಾದ ನಿದ್ದೆಗೆ ಮೆತ್ತನೆ ಹೊದಿಕೆ, ತಲೆದಿಂಬೂ ಅಗತ್ಯವಂತೆ. ಸಡಿಲವಾದ ಹತ್ತಿಯ ಪೈಜಾಮವನ್ನೂ ಧರಿಸುವುದರಿಂದ ನಿದ್ದೆ ಸೊಂಪಾಗಿ ಹಿಡಿಯುತ್ತದೆ ಎಂದು ಸಮೀಕ್ಷೆ ಹೇಳಿದೆ.
ಸಮೀಕ್ಷೆಗಾಗಿ 1 ಸಾವಿರ ಮಂದಿಯನ್ನು ಸಂದರ್ಶಿಸಲಾಗಿದ್ದು, ನಿದ್ದೆ ಬರದ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಈ ವೇಳೆ ಅವರಿಗೆ 10.30ರ ಒಳಗೆ ನಿದ್ದೆ ಮಾಡುವಂತೆ ಮತ್ತು ನಿದ್ದೆಗೆ ಉತ್ತಮ ಹೊದಿಕೆ, ತಲೆದಿಂಬು, ಸಡಿಲ ಬಟ್ಟೆ ಧರಿಸುವಂತೆ ಹೇಳಲಾಗಿದೆ.
ತಜ್ಞರ ಮಾತನ್ನು ಅನುಸರಿಸಿದವರಲ್ಲಿ ಫಲಿತಾಂಶ ಧನಾತ್ಮಕವಾಗಿತ್ತು ಎಂದು ತಿಳಿದುಬಂದಿದೆ. ಇನ್ನು ನಿದ್ದೆ ಬರದ ಸಮಸ್ಯೆಗೆ ಕಾರಣ ಶೇ.20ರಷ್ಟು ಮಂದಿಗೆ ಹಣದ ಚಿಂತೆ, ಶೇ.13ರಷ್ಟು ಮಂದಿಗೆ ಹಾಸಿಗೆಯಲ್ಲಿ ಹೆಚ್ಚು ಸೆಖೆ, ಚಳಿಯ ಅನುಭವ, ಹಾಸಿಗೆ ಸರಿಯಾಗುವುದಿಲ್ಲ ಎಂಬ ಕಂಪ್ಲೆ„ಂಟ್ ಇತ್ಯಾದಿ ಹೇಳಿದ್ದಾರೆ.
ಫಲಿತಗಳು…
ಸುಖವಾದ ನಿದ್ದೆಗೆ ಮೆತ್ತನೆ ಹೊದಿಕೆ, ತಲೆದಿಂಬು ಅಗತ್ಯ!
ಶೇ.20ರಷ್ಟು ಮಂದಿಗೆ ಹಣದ ಚಿಂತೆ, ಶೇ.13ರಷ್ಟು ಮಂದಿಗೆ ಹಾಸಿಗೆಯಲ್ಲಿ ವಿಪರೀತ ಸೆಖೆ, ಚಳಿ ಸಮಸ್ಯೆ
ನಿದ್ದೆ ವೇಳೆ ಸ್ವಲ್ಪ ಸಡಿಲವಾದ ಹತ್ತಿಯ ಪೈಜಾಮ ಧರಿಸಬೇಕು: ಸಮೀಕ್ಷೆ